ಮದುವೆಗೆ ಒಪ್ಪಿಗೆ ದೊರೆತರೂ ಪ್ರೇಮಿಗಳ ಬಾಳು ಕಂಡ ದುರಂತ ಅಂತ್ಯ..!

(ನ್ಯೂಸ್ ಕಡಬ) newskadaba.com ಕಲಬುರ್ಗಿ, ಡಿ. 18. ಎರಡು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಜೋಡಿಗೆ ಕುಟುಂಬದವರಿಂದ ಒಪ್ಪಿಗೆ ದೊರೆತಿದ್ದಾದರೂ, ಇದೇ ಸಂತೋಷದಲ್ಲಿ ನೂರಾರು ಕನಸು ಹೊತ್ತಿದ್ದ ಪ್ರಿಯಕರ ತಿಂಗಳ ಹಿಂದೆ ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದು ಮೃತಪಟ್ಟಿದ್ದು, ಇದರಿಂದ ನೊಂದ ಪ್ರೇಯಸಿಯು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಲ್ಬುರ್ಗಿಯಲ್ಲಿ ನಡೆದಿದೆ.

ಮೃತರನ್ನು ಹನುಮಂತ ಹಾಗೂ ಶೃತಿ ಎಂದು ಗುರುತಿಸಲಾಗಿದೆ. ಇವರಿಬ್ಬರೂ ಸಂಬಂಧಿಕರಾಗಿದ್ದು, ಇವರ ನಡುವಿನ ಸಲುಗೆಯೇ ಪ್ರೀತಿಗೆ ತಿರುಗುದ್ದು, ವಿಚಾರ ತಿಳಿದ ಕುಟುಂಬಿಕರು ಪ್ರೀತಿಯನ್ನು ಒಪ್ಪಿಕೊಂಡು ಮದುವೆಗೆ ಸಮ್ಮತಿಯನ್ನೂ ನೀಡಿದ್ದರು. ಆದರೆ ವಿಧಿಯಾಟವೇ ಬೇರೆಯಾಗಿದ್ದು, ಮದುವೆಯ ಕನಸು ಹೊತ್ತಿದ್ದ ಪ್ರಿಯಕರ ಹನುಮಂತ ತಿಂಗಳ ಹಿಂದೆ ಕಾಲುಜಾರಿ ಬಾವಿಗೆ ಬಿದ್ದು ಮೃತಪಟ್ಟಿದ್ದು, ಇದರಿಂದ ನೊಂದ ಶೃತಿ ಅಂದಿನಿಂದ ಸರಿಯಾಗಿ ಆಹಾರ ಸೇವಿಸದೇ, ಹನುಮಂತನಿಲ್ಲದೇ ನಾನಿರಲಾರೆ ಎಂದು ಕಣ್ಣೀರಿಡುತ್ತಿದ್ದವಳು ಮನೆಯಲ್ಲಿಯೇ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

Also Read  ಹೊಸ ವರ್ಷದಂದೇ ನಡೆಯಿತು ಭೀಕರ ಅಪಘಾತ ► ನಿಂತಿದ್ದ ಲಾರಿಗೆ ಕಾರು ಢಿಕ್ಕಿ ಹೊಡೆದು ಐವರು ಮೃತ್ಯು

error: Content is protected !!
Scroll to Top