ಅಪಾರ್ಟ್ ಮೆಂಟ್ ಒಂದರ ಐದನೇ ಮಹಡಿಯಿಂದ ಕೆಳಗೆಬಿದ್ದು ಎರಡು ವರ್ಷದ ಮಗು ಮೃತ್ಯು..!

(ನ್ಯೂಸ್ ಕಡಬ) newskadaba.com ಬೆಂಗಳೂರು, ಡಿ. 18. ಅಪಾರ್ಟ್ಮೆಂಟ್ ಒಂದರ ಐದನೇ ಮಹಡಿಯಿಂದ ಆಯತಪ್ಪಿ ಕೆಳಗೆಬಿದ್ದ ಎರಡು ವರ್ಷದ ಬಾಲಕನೋರ್ವ ಮೃತಪಟ್ಟ ಘಟನೆ ಇಲೆಕ್ಟ್ರಾನ್ ಸಿಟಿಯಲ್ಲಿ ನಡೆದಿದೆ.

ಮೃತ ಮಗುವನ್ನು ದಿವ್ಯಾಂಶ್ ರೆಡ್ಡಿ(2) ಎಂದು ಗುರುತಿಸಲಾಗಿದೆ. ಈತನ ಅಜ್ಜಿ ಕೆಲದಿನಗಳಿಂದ ನಗರದಲ್ಲಿ ಬಾಡಿಗೆ ಮನೆ ಹುಡುಕುತ್ತಿದ್ದು, ಈ ಸಂದರ್ಭ ನೀಲಾದ್ರಿ ಇನ್ವೆಸ್ಟ್ ಮೆಂಟ್ ಲೇಔಟ್ ನ ಅಪಾರ್ಟ್ಮೆಂಟ್ ಒಂದರಲ್ಲಿ ಮನೆ ಬಾಡಿಗೆಗಿರುವುದು ಗಮನಕ್ಕೆ ಬಂದ ಹಿನ್ನೆಲೆ ಶುಕ್ರವಾರದಂದು ಸಂಜೆ ಅಜ್ಜಿ ಮೊಮ್ಮಗನನ್ನು ಕರೆದುಕೊಂಡು ಐದನೇ ಮಹಡಿಯಲ್ಲಿರುವ ಮನೆ ನೋಡಲು ಹೋಗಿದ್ದ ಸಂದರ್ಭ ದಿವ್ಯಾಂಶ್ ಬಾಲ್ಕನಿಯಲ್ಲಿ ಆಟವಾಡುತ್ತಾ ಬಾಲ್ಕನಿಯಲ್ಲಿದ್ದ ಪ್ಲಾಸ್ಟಿಕ್ ಶೀಟ್ ಮೇಲೆ ಕಾಲಿಟ್ಟು, ಪಕ್ಕದಲ್ಲಿದ್ದ ಹೋಲ್ ನಿಂದ ಕೆಳಗೆ ಬಿದ್ದು ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಡಿದ್ದಾನೆ ಎನ್ನಲಾಗಿದೆ. ಸ್ಥಳಕ್ಕಾಗಮಿಸಿದ ಇಲೆಕ್ಟ್ರಾನಿಕ್ ಸಿಟಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Also Read  ಕಡಬ: ಅಕ್ರಮ ಕಸಾಯಿಖಾನೆಗೆ ದಾಳಿ, ಓರ್ವನ ಬಂಧನ ➤ ಕದ್ದ ಜಾನುವಾರುಗಳ ಸಹಿತ ಕತ್ತಿ, ತೂಕದ ಮಾಪನ ವಶಕ್ಕೆ

error: Content is protected !!
Scroll to Top