ಸದನದಲ್ಲೇ ಹೆಣ್ಣು ಮಕ್ಕಳ ಬಗ್ಗೆ ತುಚ್ಚವಾಗಿ ಮಾತನಾಡಿದ್ದು ಎಷ್ಟು ಸರಿ..? ➤ ಖಿದ್ಮಾ ಕಾರ್ಯದರ್ಶಿ ಅಮಿತಾ ಅಶೋಕ್ ಪ್ರಸಾದ್ ಪ್ರಶ್ನೆ

(ನ್ಯೂಸ್ ಕಡಬ) newskadaba.com ಡಿ. 18. ಹೆಣ್ಣನ್ನು ಭೂತಾಯಿ, ದೇವತೆ ಎಂದು ಪೂಜಿಸುವ ಈ ನಾಡಿನಲ್ಲಿ ಅಧಿಕಾರಿಯೊಬ್ಬರು ಸದನದಲ್ಲಿ ರೇಪ್ ತಡೆಯಲು ಆಗದಿದ್ದರೆ ಮಲಗಿ ಎಂಜಾಯ್ ಮಾಡಬೇಕು ಎಂಬ ಹೇಳಿಕೆ ನೀಡಿ ಹೆಣ್ಣಿನ ರಕ್ಷಣೆ ವಿಷಯ ಬಂದಾಗ ಇಂತಹದ್ದೊಂದು ಮಾತು ಅವರಿಂದ ಬಂದಿರುವುದು ವಿಷಾದನೀಯ. ಇಂತಹ ಅಧಿಕಾರಿಗಳ ನಿರ್ಲಕ್ಷದಿಂದಲೇ ಸಮಾಜದಲ್ಲಿ ಹೆಣ್ಣಿನ ಶೋಷಣೆ ಹೆಚ್ಚಾಗುತ್ತಿದೆ. ಹೆಣ್ಣಿನ ಮೇಲಾಗುತ್ತಿರುವ ದೌರ್ಜನ್ಯ, ಅತ್ಯಚಾರಗಳನ್ನು ತಡೆಯಲು ಸರ್ಕಾರ ಎಚ್ಚರಿಕೆಯ ಕ್ರಮ ಕೈಗೊಳ್ಳುವುದರೊಂದಿಗೆ ಕಠಿಣ ಶಿಕ್ಷೆಯನ್ನು ನೀಡಬೇಕು ಹಾಗೂ ಅಂತಹವರಿಗೆ ಜೊತೆ ನೀಡಿ ಪ್ರೋತ್ಸಾಹಿಸುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಸಮಾಜದಲ್ಲಿ ನಡೆಯುವ ಅನ್ಯಾಯಗಳನ್ನು ವಿರೋಧಿಸದೆ ಕಣ್ಮುಚ್ಚಿ ಮಲಗುವ ಇಂತಹ ಜನರು ತಮ್ಮ ಕುಟುಂಬದ ವಿಷಯ ಬಂದಾಗ ಇದೇ ಧೋರಣೆ ತೋರುವರೇ?? ಸರ್ಕಾರವನ್ನೇ ನಂಬಿ ಕೊಂಡಿರುವ ಸಮಾಜಕ್ಕೆ ಇಂತಹ ಅಸಡ್ಡೆ ಅಧಿಕಾರಿಗಳ ಅಗತ್ಯವಾದರೂ ನಮಗಿದೆಯೇ..? ಎಂದು ಖಿದ್ಮಾ ಫೌಂಡೇಶನ್ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಮತಿ ಅಮಿತಾ ಅಶೋಕ್ ಪ್ರಸಾದ್ ಬೆಂಗಳೂರು ಇವರು ಪ್ರಶ್ನಿಸಿದ್ದಾರೆ.

Also Read  ಕರ್ನಾಟಕ ವೀರಶೈವ ಅಭಿವೃದ್ಧಿ ನಿಗಮದಿಂದ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ

 

error: Content is protected !!
Scroll to Top