(ನ್ಯೂಸ್ ಕಡಬ) newskadaba.com ಬಂಟ್ವಾಳ, ಡಿ. 17. ಡಿಸೆಂಬರ್ 14ರಂದು ಉಪ್ಪಿನಂಗಡಿ ಪೋಲಿಸರು ಸಮುದಾಯದ ಮೂರು ನಾಯಕರನ್ನು ಅಕ್ರಮವಾಗಿ ಬಂಧಿಸಿರುವುದರ ವಿರುದ್ದ ಪೋಲಿಸ್ ಠಾಣೆಯ ಎದುರು ಪ್ರತಿಭಟನೆಯಲ್ಲಿ ವ್ಯಸ್ತನಾಗಿದ್ದ ಕಾರಣ ನನಗೆ ಸಂಜೆಯ ನಮಾಝ್ ನಿರ್ವಹಿಸಲು ಸಾಧ್ಯವಾಗಿರಲಿಲ್ಲ. ಹೊತ್ತು ಮೀರುತ್ತಾ ಬಂದಾಗ ಥಟ್ಟನೆ ನೆನಪಾದಾಗ ನಮಾಝ್ ನಿರ್ವಹಿಸಲು ಅವಸರದಲ್ಲಿ ಸ್ಥಳದಿಂದ ತೆರಳಿದ್ದೆ. ನಂತರ ನಮಾಝ್ ಮುಗಿಸಿ ಅಷ್ಟೇ ವೇಗದಲ್ಲಿ ಬಂದು ಪ್ರತಿಭಟನೆಯಲ್ಲಿ ಸೇರಿಕೊಂಡಿದ್ದೆ.
ಆದರೆ ಕಹಳೆ ನ್ಯೂಸ್ ಚಾನೆಲ್ ತನ್ನ ಟಿ.ಆರ್.ಪಿ ತೆವಳಿಗಾಗಿ, ತರಾತುರಿಯಲ್ಲಿ ತೆರಳಿದ ವೀಡಿಯೋವನ್ನು ದುರ್ಬಳಕೆ ಮಾಡಿಕೊಂಡು ನನ್ನ ವ್ಯಕ್ತಿತ್ವವನ್ನು ತೇಜೋವಧೆ ನಡೆಸಲಾಗಿದೆ. ಕಹಳೆ ನ್ಯೂಸ್ ಚಾನೆಲ್ ಇದರ ಬಗ್ಗೆ ಬಹಿರಂಗ ಕ್ಷಮೆ ಯಾಚಿಸಬೇಕು. ತಪ್ಪಿದ್ದಲ್ಲಿ ಕಾನೂನು ಕ್ರಮ ಎದುರಿಸಲು ಸಿದ್ಧರಾಗಬೇಕೆಂದು ಬಂಟ್ವಾಳ ಪುರಸಭಾ ಸದಸ್ಯರಾದ ಮುನೀಶ್ ಆಲಿ ಕಹಳೆ ನ್ಯೂಸ್ ವ್ಯವಸ್ಥಾಪಕರಿಗೆ ಎಚ್ಚರಿಸಿದ್ದಾರೆ.