ಬಂಟ್ವಾಳ: ಅಝಾನ್ ವಿರುದ್ಧ ಅಪಪ್ರಚಾರ ಮಾಡಿದ ಪ್ರಚೋದನಕಾರಿ ಭಾಷಣಗಾರ್ತಿ ಹಾರಿಕಾ ಮಂಜುನಾಥ್ ವಿರುದ್ಧ ಬಿಸ್ಮಿಲ್ಲಾ ಜುಮ್ಮಾ ಮಸ್ಜಿದ್ ವತಿಯಿಂದ ದೂರು ದಾಖಲು

(ನ್ಯೂಸ್ ಕಡಬ) newskadaba.com ಬಂಟ್ವಾಳ, ಡಿ. 17. ಅಲ್ಲಾಹು ಅಕ್ಬರ್ ಎಂದರೆ ಹಿಂದೂಗಳನ್ನು ಕೊಳ್ಳಿ ಎಂದು ಸಮಾಜಕ್ಕೆ ತಪ್ಪು ಮಾಹಿತಿ ನೀಡಿ ಸಮುದಾಯಗಳ ನಡುವೆ ವೈಷಮ್ಯ ಮೂಡಿಸಲು ಪ್ರಯತ್ನಿಸಿದ ಆರೋಪದಲ್ಲಿ ಹಾರಿಕಾ ಮಂಜುನಾಥ್ ವಿರುದ್ಧ ದೂರು ನೀಡಲಾಯಿತು.


ಬೆಳ್ತಂಗಡಿಯಲ್ಲಿ ಸೋಮವಾರ ಹಿಂದೂ ಸಂಘಟನೆಗಳ ನೇತೃತ್ವದಲ್ಲಿ ಕಿನ್ಯಮ್ಮ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಗೀತಾ ಜಯಂತಿ ಶೌರ್ಯ ಪಥಸಂಚಲನ ಕಾರ್ಯಕ್ರಮದಲ್ಲಿ ಬೆಂಗಳೂರಿನ ಹಾರಿಕಾ ಮಂಜುನಾಥ್ ಅವರು ಮುಸ್ಲಿಮರ ಅಝಾನ್ (ಮಸೀದಿಯಲ್ಲಿ ಐದು ಬಾರಿ ಮೊಳಗುವ ಸಂದೇಶ) ಬಗ್ಗೆ ದುರುದ್ದೇಶಪೂರಿತವಾಗಿ ತಪ್ಪು ಮಾಹಿತಿ ವ್ಯಾಖ್ಯಾನ ನೀಡಿದ್ದರು. ಇದರಿಂದ ಸಮಾಜಕ್ಕೆ ತಪ್ಪು ಮಾಹಿತಿ ರವಾನೆಯಾಗುತ್ತದೆ ಎಂದು ಬಿಸ್ಮಿಲ್ಲಾ ಜುಮ್ಮಾ ಮಸೀದಿ ಆಡಳಿತ ಕಮಿಟಿ ವತಿಯಿಂದ ದೂರು ನೀಡಲಾಯಿತು.

Also Read  ರಸ್ತೆ ಅಪಘಾತ: ಸವಾರ ಮೃತ್ಯು..!

error: Content is protected !!
Scroll to Top