ಕಡಬ: ಅನಾರೋಗ್ಯದಿಂದ ಬಳಲುತ್ತಿದ್ದ ಹೆಸರಾಂತ ದೈವನರ್ತಕ ಹುಕ್ರಪ್ಪ ಪರವ ವಿಧಿವಶ

(ನ್ಯೂಸ್ ಕಡಬ) newskadaba.com ಕಡಬ, ಡಿ. 16. ಹೆಸರಾಂತ ದೈವನರ್ತಕ, ಇಚಿಲಂಪಾಡಿ ಗ್ರಾಮದ ಬಿಜೇರು ನಿವಾಸಿ ಹುಕ್ರಪ್ಪ ಪರವ(72) ಅವರು ಗುರುವಾರದಂದು ತನ್ನ ಸ್ವಗೃಹದಲ್ಲಿ ನಿಧನರಾಗಿದ್ದಾರೆ.

ತನ್ನ ಹದಿನಾರನೇ ವಯಸ್ಸಿನಲ್ಲಿ ದೈವನರ್ತನ ಆರಂಭಿಸಿದ್ದ ಇವರು, ಮೂರು ವರ್ಷದ ಹಿಂದೆ ಅನಾರೋಗ್ಯಕ್ಕೆ ಒಳಗಾಗಿ ಮನೆಯಲ್ಲಿಯೇ ಇದ್ದರು. ಇವರು ಇಚಿಲಂಪಾಡಿ ಬೂಡು ಉಳ್ಳಾಕ್ಲು ದೈವಸ್ಥಾನ, ಎಣ್ಮೂರು ಕೋಟಿ ಚೆನ್ನಯ ಗರಡಿ, ಸುಳ್ಯ ಪದವು ಶ್ರೀ ಬ್ರಹ್ಮಬೈದರ್ಕಳ ಗರಡಿ, ಶಿಬಾಜೆ, ಮೊಂಟೆತಡ್ಕ ಸೇರಿದಂತೆ ಕಾಸರಗೋಡು ಹಾಗೂ ದ.ಕ ಜಿಲ್ಲೆಯ ವಿವಿಧ ದೈವಸ್ಥಾನಗಳಲ್ಲಿ ನರ್ತನ ಸೇವೆ ನೀಡುತ್ತಿದ್ದರು. ಇವರ ತಂದೆ ದಿ.ರಾಮ ಪರವರವರು ದೈವನರ್ತಕರಾಗಿದ್ದು, ಅವರ ಬಳಿಕ ಹುಕ್ರಪ್ಪ ಪರವರವರು ನರ್ತನ ಸೇವೆ ನೀಡುತ್ತಿದ್ದರು. ಇವರು ಪತ್ನಿ ಕಮಲ, ಪುತ್ರರಾದ ಚೆನ್ನಪ್ಪ ಪರವ ಹಾಗೂ ಡೀಕಯ್ಯ ಪರವರವರನ್ನು ಅಗಲಿದ್ದಾರೆ.

Also Read  ವಿಟ್ಲ: ಅಟೋ ರಿಕ್ಷಾದಲ್ಲಿ ಅಕ್ರಮ ಗೋಮಾಂಸ ಸಾಗಾಟ ➤ 30 ಕೆಜಿ ಮಾಂಸದ ಸಹಿತ ಅಟೋ ರಿಕ್ಷಾ ವಶಕ್ಕೆ

error: Content is protected !!
Scroll to Top