ಕನ್ನಡದ ಬಾವುಟಕ್ಕೆ ಬೆಂಕಿ ಹಚ್ಚಿದ ಕಿಡಿಗೇಡಿಗಳು ➤ ಖಿದ್ಮಾ ಫೌಂಡೇಶನ್ ಕರ್ನಾಟಕ ವ್ಯಾಪಕ ಖಂಡನೆ

(ನ್ಯೂಸ್ ಕಡಬ) newskadaba.com ಡಿ. 16. ನಾಡಧ್ವಜ ತಾಯಿ ಭುವನೇಶ್ವರಿಯ ಬಾವುಟವನ್ನು ಸುಟ್ಟಂತಹ ಕನ್ನಡ ವಿರೋಧಿಗಳನ್ನು ಕೂಡಲೇ ಬಂಧಿಸಬೇಕು. ಇದು ಕನ್ನಡಕ್ಕೂ ಕನ್ನಡ ನಾಡು ನುಡಿ, ಸಂಸ್ಕೃತಿ ಮತ್ತು ಎಲ್ಲಾ ಕನ್ನಡಗರಿಗೆ ಮಾಡಿದ ಅವಮಾನವಾಗಿದೆ. ನಮ್ಮ ನಾಡಿನ ವಿರುದ್ಧ ಧ್ವನಿಯೆತ್ತಿದವರಿಗೆ ಮಸಿ ಬಳಸಿದ ಕನ್ನಡ ಪರ ಹೋರಾಟಗಾರನನ್ನು ಬಂಧಿಸಿದ್ದು, ಕನ್ನಡಕ್ಕೆ ಮಾಡಿದ ಮಹಾ ಪಾಪವಾಗಿದೆ. ಕೂಡಲೇ ಅಪರಾಧಿಗಳನ್ನು ಬಂದಿಸಿ ನಿರಪರಾಧಿಗಳನ್ನು ಬಿಡುಗಡೆಗೊಳಿಸಬೇಕಾಗಿದೆ. ಕನ್ನಡ ವಿರೋಧಿ ಕೃತ್ಯಗಳನ್ನೆಸೆಯುವ ವ್ಯಕ್ತಿಗಳನ್ನು, ಅವರ ಸಂಘಟನೆಗಳನ್ನು ಕೂಡಲೇ ಸರ್ಕಾರ ಬಹಿಷ್ಕರಿಸಬೇಕು ಎಂದು ಖಿದ್ಮಾ ಫೌಂಡೇಶನ್ ಕರ್ನಾಟಕ ರಾಜ್ಯ ಸಂಚಾಲಕ ಆಮಿರ್ ಬನ್ನೂರು ಅಭಿಪ್ರಾಯ ಪಟ್ಟಿದ್ದಾರೆ.

Also Read  ದೇರಳಕಟ್ಟೆಯಲ್ಲಿ 1.236 ಗ್ರಾಂ ಹೈಡೋವೀಡ್ ಗಾಂಜಾ ವಶಕ್ಕೆ ➤ ವೈದ್ಯ ವಿದ್ಯಾರ್ಥಿನಿ ಸಹಿತ ಇಬ್ಬರ ಬಂಧನ

 

 

 

 

error: Content is protected !!
Scroll to Top