“ಪುತ್ತೂರು ಕಾಲೇಜು ವಿದ್ಯಾರ್ಥಿನಿಯರೇ ಎಚ್ಚರಿಕೆ..ಬ್ಯಾರಿಗಳ ಜೊತೆ ಮಾತನಾಡುವುದನ್ನು ಗಮನಿಸಿದ್ದೇವೆ..” ➤ ಇನ್ಸ್ಟಾಗ್ರಾಂ ಪೇಜ್ ನಲ್ಲಿ ಸಂಘಟನೆಯ ಎಚ್ಚರಿಕೆ

(ನ್ಯೂಸ್ ಕಡಬ) newskadaba.com ಪುತ್ತೂರು, ಡಿ. 16. ಇತ್ತೀಚಿನ ದಿನಗಳಲ್ಲಿ ಹಿಂದೂ ವಿದ್ಯಾರ್ಥಿನಿಯರು ಮುಸ್ಲಿಂ ಯುವಕರ ಜೊತೆ ಮಾತನಾಡಲು, ಸುತ್ತಾಡಲು ಹೋಗಿ ಸಿಕ್ಕಿಹಾಕಿಕೊಂಡು ಹಿಂದೂ ಸಂಘಟನೆಗಳಿಂದ ಹೊಡೆಸಿಕೊಂಡ ಘಟನೆಗಳು ನಡೆದಿದ್ದು, ಇನ್ಮುಂದೆ ಇಂಥಹ ಪರಿಸ್ಥಿತಿ ಬಾರದಿರಲು ಹಿಂದೂ ಸಂಘಟನೆಯು ವಿದ್ಯಾರ್ಥಿನಿಯರಿಗೆ ಎಚ್ಚರಿಕೆಯ ಪೋಸ್ಟರ್ ಒಂದನ್ನು ಇನ್ಸ್ಟಾಗ್ರಾಂ ಪೇಜ್ ಮೂಲಕ ಹರಿಬಿಟ್ಟಿದೆ.

ಇದರಲ್ಲಿ “ಪುತ್ತೂರು ಕಾಲೇಜಿನ ಹಿಂದೂ ವಿದ್ಯಾರ್ಥಿನಿಯರು ಬಸ್ ಸ್ಟ್ಯಾಂಡ್ ಹಾಗೂ ಬ್ಯಾರಿಗಳ ಅಂಗಡಿಯಲ್ಲಿ ಅವರ ಜೊತೆ ಮಾತಾಡುವುದು, ಪೆರ್ಚಿ ಕಟ್ಟುವುದು ಗಮನಿಸುತ್ತಿದ್ದೇವೆ. ನೀವಾಗಿಯೇ ಬದಲಾಗುತ್ತೀರಾ..? ಅಥವಾ ನಾವೇ ಬದಲಾಯಿಸಬೇಕಾ..? ಇದಕ್ಕಿಂತ ಮುಂಚೆ ಇಂತಹ ಸುಮಾರು ಘಟನೆಗಳು ನಡೆದಿವೆ. ಇನ್ನುಮುಂದೆ ಬ್ಯಾರಿಗಳ ಜೊತೆ ಮಾತಾಡುವುದು ಕಂಡು ಬಂದರೆ ಮುಲಾಜಿಲ್ಲದೇ ನಿಮ್ಮ ವಿಡಿಯೋ ಅಥವಾ ಫೋಟೋ ನಮ್ಮ ಹಿಂದೂ ಪೇಜ್ ಗಳಲ್ಲಿರುತ್ತವೆ. ಪುತ್ತೂರು ಬಸ್ ನಿಲ್ದಾಣದಲ್ಲಿ ನಮ್ಮ ಹುಡುಗರು ಹದ್ದಿನ ಕಣ್ಣಿಟ್ಟಿದ್ದಾರೆ…ಎಚ್ಚರಿಕೆ @team_dakaha_118 @team_daksha_118” ಎಂಬ ಬರಹವಿರುವ ವಿಡಿಯೋ ಇದೀಗ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

error: Content is protected !!
Scroll to Top