ಕೋವಿಡ್ ಲಸಿಕೆ ಹಾಕಿಸಿಕೊಳ್ಳದ ಉದ್ಯೋಗಿಗಳನ್ನು ವಜಾಗೊಳಿಸಲಿರುವ ಗೂಗಲ್..!

(ನ್ಯೂಸ್ ಕಡಬ) newskadaba.com ನವದೆಹಲಿ, ಡಿ. 16. ತನ್ನ ಸಂಸ್ಥೆಯ ಉದ್ಯೋಗಿಗಳು ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸದಿದ್ದಲ್ಲಿ ವೇತನ ಕಡಿತದ ಜೊತೆಗೆ ಕ್ರಮೇಣ ಕೆಲಸದಿಂದ ವಜಾ ಮಾಡಲು ಗೂಗಲ್ ನಿರ್ಧರಿಸಿದ್ದು, ಈ ಕುರಿತು ಉದ್ಯೋಗಿಗಳಿಗೆ ಸೂಚನೆಯನ್ನೂ ನೀಡಿದೆ.

ವರದಿಗಳ ಪ್ರಕಾರ, ಗೂಗಲ್ ಹೊರಡಿಸಿರುವ ಆದೇಶದಲ್ಲಿ ವ್ಯಾಕ್ಸಿನೇಷನ್‌ ಸ್ಥಿತಿ ಘೋಷಸಲು ಮತ್ತು ಕೋವಿಡ್ ಪ್ರಮಾಣಪತ್ರ ಅಪ್ಲೋಡ್ ಮಾಡಲು ಹಾಗೂ ವೈದ್ಯಕೀಯ ಅಥವಾ ವಿನಾಯಿತಿಗಾಗಿ ಡಿ. 03ರ ವರೆಗೆ ಸಮಯಾವಕಾಶ ನೀಡಲಾಗಿತ್ತು ಎಂದು ಹೇಳಿದೆ. ಈ ನಿಗದಿತ ವಾಯಿದೆ ಮುಗಿದರೂ ಕೋವಿಡ್ ಲಸಿಕೆ ಹಾಕಿಸಿಕೊಳ್ಳದ ಉದ್ಯೋಗಿಗಳನ್ನು ಗೂಗಲ್ ಸಂಪರ್ಕಿಸಲು ಪ್ರಾರಂಭಿಸಲಿದೆ ಎಂದು ಸಿಎನ್ ಬಿಸಿ ವರದಿ ಮಾಡಿದೆ. ಜನವರಿ 18ರ ಒಳಗೆ ಲಸಿಕೆ ಹಾಕಿಸದ ಉದ್ಯೋಗಿಗಳನ್ನು 30 ದಿನಗಳವರೆಗೆ ಪಾವತಿ ಸಹಿತ ರಜೆಯಲ್ಲಿ ಇರಿಸಲಾಗುತ್ತದೆ. ಬಳಿಕ ಆರು ತಿಂಗಳವರೆಗೆ ಪಾವತಿ ರಹಿತ ವೈಯಕ್ತಿಕ ರಜೆ ಮತ್ತು ಅಂತಿಮವಾಗಿ ವಜಾಗೊಳಿಸಲಾಗುತ್ತದೆ ಎಂದು ಹೇಳಿದೆ. ಒಮಿಕ್ರಾನ್ ಆತಂಮದ ಹಿನ್ನೆಲೆ ಉದ್ಯೋಗಿಗಳು ಕಛೇರಿಗೆ ಹಿಂದಿರುಗುವುದನ್ನು ಗೂಗಲ್ ಆಲ್ಬಂ ವಿಳಂಬಗೊಳಿಸಿತ್ತು ಅಲ್ಲದೇ ಎಲ್ಲಾ ಉದ್ಯೋಗಿಗಳಿಗೂ ಕೋವಿಡ್ ಲಸಿಕೆ ಹಾಕಿಸಿಕೊಳ್ಳುವುದನ್ನು ಕಡ್ಡಾಯಗೊಳಿಸಿದೆ.

Also Read  ಮದುವೆಯಾಗುವುದಾಗಿ ನಂಬಿಸಿ ಮೋಸ ➤ ಮೈಮೇಲೆ ಬಿಸಿ ಎಣ್ಣೆ ಎರಚಿದ ಪ್ರೇಯಸಿ- ಯುವಕ ಗಂಭೀರ

error: Content is protected !!
Scroll to Top