ಮುಖ್ಯಮಂತ್ರಿಯ ಸ್ಪೆಷಲ್ ಆಫೀಸರ್ ಎಂದು ಹೇಳಿ ಸರಕಾರಿ ಲಾಂಛನವಿರುವ ಕಾರಿನಲ್ಲಿ ಸುತ್ತಾಡುತ್ತಿದ್ದ ಖತರ್ನಾಕ್..! ➤ ಐಎಎಸ್, ಐಪಿಎಸ್ ಅಧಿಕಾರಿಗಳಿಗೆ ವಂಚನೆ ಮಾಡಿದ ಬಾಳೆಕಾಯಿ ವ್ಯಾಪಾರಿ

(ನ್ಯೂಸ್ ಕಡಬ) newskadaba.com ಬೆಂಗಳೂರು, ಡಿ. 16. ಮುಖ್ಯಮಂತ್ರಿಗಳ ವಿಶೇಷ ಅಧಿಕಾರಿ ಸೋಗಿನಲ್ಲಿ ವರ್ಗಾವಣೆ ಡೀಲಿಂಗ್ ಮಾಡಿ ಕೋಟ್ಯಂತರ ರೂ. ವಂಚಿಸಿದ ಆರೋಪಿಯು ಸಿಸಿಬಿ ಪೊಲೀಸರ ಬಲೆಗೆ ಬಿದ್ದ ಘಟನೆ ವರದಿಯಾಗಿದೆ.

ಬಂಧಿತನನ್ನು ಚಿಕ್ಕಬಳ್ಳಾಪುರ ಮೂಲದ ಸದ್ಯ ಮೈಲಸಂದ್ರದಲ್ಲಿ ವಾಸವಾಗಿರುವ ಉದಯಪ್ರಭು ಎಂದು ಗುರುತಿಸಲಾಗಿದೆ. ಈತ ಬಿನ್ನಿಮಲ್ ಸಮೀಪ ಬಾಳೆಕಾಯಿ ವ್ಯಾಪಾರ ನಡೆಸುತ್ತಿದ್ದ ಎನ್ನಲಾಗಿದೆ. ಈತ ಹಾಲಿ ಮುಖ್ಯಮಂತ್ರಿ ಕಛೇರಿಯ ಸ್ಪೆಷಲ್ ಆಫೀಸರ್ ಎಂದು ಹೇಳಿ ಸರಕಾರಿ ಲಾಂಛನವಿರುವ ಕಾರಿನಲ್ಲಿ ಸುತ್ತಾಡುತ್ತಿದ್ದು, ಐಪಿಎಸ್ ಹಾಗೂ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡುವುದಾಗಿ ಕೋಟ್ಯಾಂತರ ರೂ. ವಂಚಿಸಿದ್ದಲ್ಲದೇ ಕೆಲವರನ್ನು ವರ್ಗಾವಣೆ ಕೂಡಾ ಮಾಡಿಸಿದ್ದ ಎಂಬುವುದು ತನಿಖೆಯ ವೇಳೆ ತಿಳಿದುಬಂದಿದೆ. ಉದಯಪ್ರಭು ಬಳಸುತ್ತಿದ್ದ ಜಾಗ್ವಾರ್ ಕಾರು ಹಾಗೂ ಇನ್ನೋವಾ ಕ್ರಿಸ್ಟಾ ಕಾರನ್ನು ವಶಕ್ಕೆ ಪಡೆಯಲಾಗಿದ್ದು, ಕಾರಿನಲ್ಲಿ ಹಲವು ದಾಖಲೆಗಳೂ ಸಿಕ್ಕಿವೆ ಎಂದು ಪೊಲೀಸರು ತಿಳಿಸಿದ್ದಾರೆ.

Also Read  ಅರಿಯಡ್ಕ: ಕಾರು - ಲಾರಿ ಮುಖಾಮುಖಿ ►ನಾಲ್ವರು ಗಂಭೀರ

 

 

error: Content is protected !!
Scroll to Top