ತೊಕ್ಕೊಟ್ಟು: ವೈಯಕ್ತಿಕ ಕಾರಣ ಮುಂದಿಟ್ಟು ರಿಕ್ಷಾ ಚಾಲಕನಿಗೆ ಚೂರಿ ಇರಿತ..! ➤ ಪ್ರಕರಣ ದಾಖಲು

(ನ್ಯೂಸ್ ಕಡಬ) newskadaba.com ತೊಕ್ಕೊಟ್ಟು, ಡಿ. 16. ವೈಯಕ್ತಿಕ ಕಾರಣವನ್ನು ಮುಂದಿಟ್ಟು ರಿಕ್ಷಾ ಚಾಲಕ ಯುವಕನೋರ್ವನ ಮನೆ ಆವರಣಕ್ಕೆ ನುಗ್ಗಿ ಕೊಲೆಗೆ ಯತ್ನಿಸಿದ್ದಲ್ಲದೆ, ತಡೆಯಲು ಬಂದಾತನಿಗೂ ಇರಿದು ಗಾಯಗೊಳಿಸಿದ ಘಟನೆ ಕುಂಪಲ ಹನುಮಾನ್ ನಗರ ಎಂಬಲ್ಲಿ ನಡೆದಿದೆ.

ಗಾಯಗೊಂಡವರನ್ನು ಕುಂಪಲ ಹನುಮಾನ್ ನಗರದ ನಿವಾಸಿ ರಿಕ್ಷಾ ಚಾಲಕ ಸುನಿಲ್ ಹಾಗೂ ಇನ್ನೋರ್ವ ರಿಕ್ಷಾ ಚಾಲಕ ಜಯಪ್ರಕಾಶ್ ಎಂದು ಗುರುತಿಸಲಾಗಿದೆ. ಕುಂಪಲ ಬಗಂಬಿಲ ನಿವಾಸಿ ರೋಕೇಶ್ ಯಾನೆ ರೋಸ್ ಎಂಬಾತನು ತನ್ನ ಗೆಳೆಯ ದುರ್ಗೇಶ್ ಜೊತೆ ಆಟೋ ರಿಕ್ಷಾದಲ್ಲಿ ಹನುಮಾನ್ ನಗರದ ಸುನಿಲ್ ಎಂಬವರ ಮನೆ ಆವರಣಕ್ಕೆ ರಾತ್ರಿ ನುಗ್ಗಿ, ಸುನಿಲ್‌ನನ್ನು ಮನೆಯಿಂದ ಹೊರಗೆ ಕರೆದು ಚಾಕುವಿನಿಂದ ತೋಳು, ಹೊಟ್ಟೆ, ಕಾಲು ಹಾಗೂ ಬೆನ್ನಿಗೆ ಇರಿದಿದ್ದಾನೆ ಎನ್ನಲಾಗಿದೆ. ಇದನ್ನು ತಡೆಯಲು ಬಂದ ಸುನಿಲ್‌ ಸ್ನೇಹಿತ ಜಯ ಪ್ರಕಾಶ್ ಎಂಬವನಿಗೂ ರೋಕೇಶ್ ಇರಿದಿದ್ದು, ಗಾಯಾಳುಗಳು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ರೋಕೇಶ್ ಯಾನೆ ರೋಸ್, ಸುನಿಲ್ ಹಾಗೂ ಜಯಪ್ರಕಾಶ್ ಕುಂಪಲ ಬೈಪಾಸ್ ರಿಕ್ಷಾ ಪಾರ್ಕ್‌ನಲ್ಲಿ ಆಟೋ ರಿಕ್ಷಾ ಚಾಲಕರಾಗಿದ್ದು, ವೈಯಕ್ತಿಕ ವಿಚಾರವನ್ನು ಮುಂದಿಟ್ಟು ಈ ಕೃತ್ಯವೆಸಗಿದ್ದಾನೆ ಎನ್ನಲಾಗಿದೆ.ಈ ಕುರಿತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ಈ ಐದು ಅರ್ಹತೆಗಳಿದ್ದಲ್ಲಿ ನಿಮಗೂ ಸಿಗುತ್ತದೆ ಕಾರು ಭಾಗ್ಯ

error: Content is protected !!
Scroll to Top