ಎಸ್ಸೆಸ್ಸೆಫ್ ಬೈತಡ್ಕ: ಮಹ್ಳರತುಲ್ ಬದ್ರಿಯ್ಯಾ ಮಜ್ಲಿಸ್ ಹಾಗೂ ಸನ್ಮಾನ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಕಾಣಿಯೂರು, ಡಿ. 15. ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ ಎಸ್ಸೆಸ್ಸೆಫ್ ಬೈತಡ್ಕ ಶಾಖೆ ಇದರ ವತಿಯಿಂದ ಮಾಸಿಕ ಮಹ್ಳರತುಲ್ ಬದ್ರಿಯ್ಯಾ ಮಜ್ಲಿಸ್ ಡಿ.13 ರಂದು ಬೆಳಂದೂರಿನ ಎಸ್ಸೆಸ್ಸೆಫ್ ಕಛೇರಿಯಲ್ಲಿ ನಡೆಯಿತು.

ಕರ್ನಾಟಕ ಮುಸ್ಲಿಂ ಜಮಾಅತ್ ಪುತ್ತೂರು ತಾಲೂಕು ಸಮಿತಿಯ ಅಧ್ಯಕ್ಷರಾದ ಬಿ.ಪಿ ಇಸ್ಮಾಯಿಲ್ ಹಾಜಿ ಅಧ್ಯಕ್ಷತೆ ವಹಿಸಿದ್ದರು. SSF ಜಿಲ್ಲಾ ನಾಯಕ ಮಾಸ್ಟರ್ ಶಫೀಕ್ ತಿಂಗಳಾಡಿ ಸಂಘಟನಾ ತರಬೇತಿ ನಡೆಸಿಕೊಟ್ಟರು. ಅಬ್ದುಲ್ ಲತೀಫ್ ಮಿಸ್ಬಾಹಿ ಮಹ್ಳರತುಲ್ ಬದ್ರಿಯ್ಯಾ ಮಜ್ಲಿಸಿಗೆ ನೇತೃತ್ವ ನೀಡಿದರು. ಬಳಿಕ ಇತ್ತೀಚೆಗೆ ನಡೆದ SSF ರಾಜ್ಯ ಮಟ್ಟದ ಪ್ರತಿಭೋತ್ಸವದ ಸೀನಿಯರ್ ವಿಭಾಗದ ಕನ್ನಡ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಬಿಪಿ ಸಿನಾನ್ ಬೈತಡ್ಕ, ಜಿಲ್ಲಾ ಮಟ್ಟದ ಕಿರಾಅತ್ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದ ಬಿ ಪಿ ಅಹ್ಮದ್ ಬೈತಡ್ಕ ಹಾಗೂ ಡಿವಿಷನ್ ಮಟ್ಟದ ರೈನ್ ಬೋ ವಿಭಾಗದ ಇಂಗ್ಲೀಷ್ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಅಝೀಂ ಅವರನ್ನು ಸಂಘಟನೆಯ ವತಿಯಿಂದ ಶಾಲು ಹೊದಿಸಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಇಮ್ರಾನ್ ರೆಂಜಲಾಡಿ, ಯೂಸುಫ್ ಸಖಾಫಿ, ನಝೀರ್ ದೇವಸ್ಯ, ಮಾಮು ಬೆಳಂದೂರು, ಇಸ್ಮಾಯಿಲ್ ದೇವಸ್ಯ ಶರೀಫ್ ಸಅದಿ ಸೇರಿದಂತೆ ಸಂಘಟನೆಯ ಕಾರ್ಯಕರ್ತರು ಉಪಸ್ಥಿತರಿದ್ದರು. ಅಬ್ಬುಲ್ ಲತೀಸ್ ಎಸ್.ಎಂ ಸ್ವಾಗತಿಸಿ ಅನ್ಸಾರ್ ಸಅದಿ ವಂದಿಸಿದರು.

Also Read  ಕಡಬ: ತಾಲೂಕು ಪಟ್ಟಣ ಪಂಚಾಯತ್ ಆಡಳಿತಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ಜಾನ್ ಪ್ರಕಾಶ್ ರೋಡ್ರಿಗಸ್

error: Content is protected !!
Scroll to Top