ಉಪ್ಪಿನಂಗಡಿ ಪೊಲೀಸರ ಬರ್ಬರ ಲಾಠಿ ಚಾರ್ಜ್ ಖಂಡಿಸಿ ಮಂಗಳೂರಿನಲ್ಲಿ ಕ್ಯಾಂಪಸ್ ಫ್ರಂಟ್ ಪ್ರತಿಭಟನೆ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ. 15. ಉಪ್ಪಿನಂಗಡಿಯಲ್ಲಿ ಅಕ್ರಮವಾಗಿ ಸಾಮಾಜಿಕ ಹೋರಾಟಗಾರರನ್ನು ಬಂಧಿಸಿದ್ದ ಪೊಲೀಸರ ನಡೆಯನ್ನು ಖಂಡಿಸಿ ಪ್ರತಿಭಟಿಸುತ್ತಿದ್ದ ಪ್ರತಿಭಟನಾಕಾರರ ಮೇಲೆ ಪೊಲೀಸರು ನಡೆಸಿದ ಭೀಕರ ಲಾಠಿ ಪ್ರಹಾರದ ಘಟನೆಯನ್ನು ಖಂಡಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಮಂಗಳೂರು ಜಿಲ್ಲಾ ಸಮಿತಿ ವತಿಯಿಂದ ನಗರದ ಕ್ಲಾಕ್ ಟವರ್ ಬಳಿ ಪ್ರತಿಭಟನೆ ನಡೆಯಿತು.


ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಕ್ಯಾಂಪಸ್ ಫ್ರಂಟ್ ಕರ್ನಾಟಕ ರಾಜ್ಯ ಸಮಿತಿ ಸದಸ್ಯರಾದ ಸಿರಾಜ್ ಮಂಗಳೂರು, ಉಪ್ಪಿನಂಗಡಿಯಲ್ಲಿ ಅಕ್ರಮವಾಗಿ ಸಾಮಾಜಿಕ ಹೋರಾಟಗಾರರನ್ನು ಬಂಧಿಸಿದ್ದ ಪೊಲೀಸರ ನಡೆಯನ್ನು ಖಂಡಿಸಿ ಪ್ರತಿಭಟಿಸುತ್ತಿದ್ದ ಪ್ರತಿಭಟನಾಕಾರರ ಮೇಲೆ ಪೊಲೀಸರು ನಡೆಸಿದ ಭೀಕರ ಲಾಠಿ ಪ್ರಹಾರದ ಘಟನೆಯು ರಾಜ್ಯಕ್ಕೆ ಸ್ಪಷ್ಟ ನಿದರ್ಶನವಾಗಿದೆ. ಪೊಲೀಸರ ತಾರತಮ್ಯ ನೀತಿ, ಕೋಮುವಾದಿ ಮನಸ್ಥಿತಿಯು ಕರ್ನಾಟಕದ ಸೌಹಾರ್ದತೆಯ ಪರಂಪರೆಗೆ ಕಪ್ಪು ಚುಕ್ಕೆಯಾಗಿದೆ. ಹೀಗೆ ಮುಂದುವರೆದರೆ ರಾಜ್ಯದಲ್ಲಿ ಪೊಲೀಸರಿಂದಲೇ ಅವರ ನಡೆಯಿಂದಾಗಿ ಶಾಂತಿ ಸುವ್ಯವಸ್ಥೆಗೆ ಧಕ್ಕೆಯಾಗಲಿದೆ ಎಂದರು.

Also Read  ಜೋಕಟ್ಟೆ ಅಂಜುಮಾನ್ ಸುವರ್ಣ ಮಹೋತ್ಸವ ಸಮಾರೋಪ

ಜಿಲ್ಲಾಧ್ಯಕ್ಷ ಸರ್ಫುದ್ದೀನ್ ಮಾತನಾಡಿ, ಜಿಲ್ಲೆಯ ಶಾಂತಿ ಕದಡಲು ಸಂಘಪರಿವಾರ ವಿದ್ಯಾರ್ಥಿಗಳನ್ನು ಉಪಯೋಗಿಸುತ್ತಿದೆ.‌ತ್ರಿಶೂಲ ವಿತರಣೆ ಮಾಡುತ್ತಿದೆ. ಬಹಿರಂಗವಾಗಿ ಜಿಲ್ಲಾಧಿಕಾರಿಗಳಿಗೆ, ಪೊಲೀಸ್ ಅಧಿಕಾರಿಗಳಿಗೆ ಬೆದರಿಕೆ ಹಾಕುತ್ತಿದ್ದರಾದರೂ ಚಲಾವಣೆಯಾಗದ ಲಾಠಿಗಳು, ಬೂಟುಗಳು ಇಂದು ಮುಸಲ್ಮಾನ ಶಾಂತಿಯತ ಪ್ರತಿಭಟನಾಕಾರರ ಮೇಲೆ ಪ್ರಯೋಗವಾಗುವುದಾದರೆ ಇದರ ಒಳಮರ್ಮ ಚೆನ್ನಾಗಿ ಜಿಲ್ಲೆಯ ಜನತೆಗೆ ಮನದಟ್ಟಾಗಿದೆ. ಇದಕ್ಕೆ ತಕ್ಕ ಉತ್ತರ ಜಿಲ್ಲೆಯ ಜನತೆ ನೀಡಲಿದ್ದಾರೆ ಎಂದರು. ಈ ಸಂದರ್ಭದಲ್ಲಿ ಕ್ಯಾಂಪಸ್ ಫ್ರಂಟ್ ರಾಜ್ಯ ಸಮಿತಿ ಸದಸ್ಯೆ ಮುರ್ಶಿದಾ ಮಂಗಳೂರು, ನಗರ ಕಾರ್ಯದರ್ಶಿ ಹಫೀಝ್, ಗ್ರಾಮಾಂತರ ಅಧ್ಯಕ್ಷ ಅಶ್ರಫ್ ಪೊರ್ಕೊಡಿ, ಕಾರ್ಯದರ್ಶಿ ಸರ್ಫರಾಝ್, ಬಂಟ್ವಾಳ ಅಧ್ಯಕ್ಷ ಅಶ್ಫಾಕ್ ಮೊದಲಾದವರು ಉಪಸ್ಥಿತರಿದ್ದರು.

Also Read  ► ಬೆಳ್ತಂಗಡಿ: ಕಾಡುಹಂದಿ ದಾಳಿಗೆ ವ್ಯಕ್ತಿ ಬಲಿ

 

error: Content is protected !!
Scroll to Top