(ನ್ಯೂಸ್ ಕಡಬ) newskadaba.com ಪುತ್ತೂರ, ಡಿ. 15. ಡಾ. ಶಿವರಾಮ ಕಾರಂತರು ನಾಟ್ಯ ತರಬೇತಿ ನೀಡುತ್ತಿದ್ದ ಸುಮಾರು 156 ವರ್ಷಗಳ ಹಿಂದಿನ ಪುರಾತನ ಕಟ್ಟಡವನ್ನು ರಾತ್ರೋರಾತ್ರಿ ನೆಲಸಮ ಮಾಡಿರುವ ಕುರಿತು ತನಿಖೆ ನಡೆಸಿ ವರದಿ ಸಲ್ಲಿಸುವಂತೆ ದ.ಕ ಜಿಲ್ಲಾಧಿಕಾರಿ ಡಿಡಿಪಿಐ ಹಾಗೂ ಜಿ.ಪಂ ಸಿಇಒ ಗೆ ಸೂಚನೆ ನೀಡಿದ್ದಾರೆ.
ಪುತ್ತೂರಿನ ಹೃದಯಭಾಗದಲ್ಲಿರುವ ಈ ಪ್ರಾಚೀನ ಕಟ್ಟಡವು 1865ರಲ್ಲಿ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯು ಆರಂಭಿಸಿದ ಲಂಡನ್ ಥಿಯೇಟರ್ ಮಾದರಿಯ ಶಾಲೆಯಾಗಿತ್ತು, ಅಲ್ಲದೇ ಪುತ್ತೂರು ಹಾಗೂ ಅಕ್ಕಪಕ್ಕದ ತಾಲೂಕುಗಳಲ್ಲಿ ಶಾಲೆಯೇ ಇಲ್ಲದ ಸಂದರ್ಭ ಬ್ರಿಟಿಷ್ ಸರಕಾರ ಸ್ಥಾಪಿಸಿದ ಮೊಟ್ಟಮೊದಲ ಶಾಲೆಯಾಗಿತ್ತು. ಈ ಶಾಲೆಯಲ್ಲಿ ಸುಮಾರು 83 ವರ್ಷಗಳ ಹಿಂದೆ ಡಾ. ಶಿವರಾಮ ಕಾರಂತರು ನಾಟ್ಯ ತರಬೇತಿಯನ್ನು ನೀಡುತ್ತಿದ್ದರು. ಆದರೆ ಡಿಸೆಂಬರ್ 11ರಂದು ಎಸ್ಡಿಎಂಸಿ ಈ ಕಟ್ಟಡ ಸುರಕ್ಷಿತವಲ್ಲ ಎಂಬ ನಿಟ್ಟಿನಲ್ಲಿ ನೆಲಸಮ ಮಾಡಿತ್ತು. ಈ ಕುರಿತು ಜಿಲ್ಲಾಧಿಕಾರಿ ಡಿಡಿಪಿಐ ವರದಿ ನೀಡುವಂತೆ ಜಿ.ಪಂ ಸಿಇಒ ಗೆ ಸೂಚನೆ ನೀಡಿದ್ದಾರೆ.