ನಿಧಿಯ ಆಸೆಗೆ ಶ್ರೀಕೃಷ್ಣನ ದೇಗುಲ ದ್ವಂಸಗೈದ ಕಿಡಿಗೇಡಿಗಳು..!

(ನ್ಯೂಸ್ ಕಡಬ) newskadaba.com ರಾಯಚೂರು, ಡಿ. 11. ನಿಧಿಯ ಆಸೆಗೆ ಬಿದ್ದು ಶ್ರೀ ಕೃಷ್ಣನ ಪುಟ್ಟ ದೇಗುಲವೊಂದನ್ನು ದ್ವಂಸಗೈದಿರುವ ಘಟನೆ ಜಿಲ್ಲೆಯ ದೇವದುರ್ಗ ತಾಲೂಕಿನ ಯಾಟಗಲ್ ಗ್ರಾಮದಲ್ಲಿ ನಡೆದಿದೆ.


ಯಾಟಗಲ್ ಗ್ರಾಮದ ಸರಕಾರಿ ಶಾಲೆಯೊಂದರ ಪಕ್ಕದಲ್ಲಿರುವ ಶ್ರೀ ಕೃಷ್ಣನ ದೇಗುಲದ ವಿಗ್ರಹದ ಕೆಳಗೆ ನಿಧಿ ಇರುವುದಾಗಿ ಪ್ರತೀತಿ ಇದ್ದು, ಈ ಕಾರಣದಿಂದ ಯಾರೋ ಕಿಡಿಗೇಡಿಗಳು ಶುಕ್ರವಾರದಂದು ತಡರಾತ್ರಿ ಗುಂಡಿ ತೋಡಿ ಪೂಜಾ ಸ್ಥಳವನ್ನು ಹಾನಿಮಾಡಿದ್ದಾರೆ. ಬೆಳಗ್ಗೆ ಪೂಜೆಗೆಂದು ಬಂದ ಗ್ರಾಮಸ್ಥರಿಗೆ ಘಟನೆ ಬೆಳಕಿಗೆ ಬಂದಿದ್ದು, ದೇವದುರ್ಗ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Also Read  2022 ರಲ್ಲಿ 185 ಸೈಬರ್ ಕ್ರೈಮ್ ಪ್ರಕರಣ ದಾಖಲು- ಆರೋಪಿಗಳಿಗೆ ಇದುವರೆಗೆ ಶಿಕ್ಷೆಯಾಗಿಲ್ಲ ➤ ಗೃಹಸಚಿವ ಆರಗ ಜ್ಞಾನೇಂದ್ರ

 

 

error: Content is protected !!
Scroll to Top