ಮಂಗಳೂರು: ಮತಾಂತರಕ್ಕೆ ಯತ್ನಿಸಿ ನಾಲ್ವರ ಸಾವಿಗೆ ಕಾರಣಳಾದ ಮಹಿಳೆ ಅಂದರ್..!

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ. 11. ಒಂದೇ ಕುಟುಂಬದ ನಾಲ್ವರ ಸಾವು ಪ್ರಕರಣದಲ್ಲಿ ನೂರ್ ಜಹಾನ್ ಎಂಬ ಮಹಿಳೆಯು ಮತಾಂತರಕ್ಕೆ ಯತ್ನಿಸಿದ ಘಟನೆ ದೃಢವಾಗಿದ್ದು, ಆಕೆಯನ್ನು ಬಂಧಿಸಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಶನಿವಾರದಂದು ತಿಳಿಸಿದ್ದಾರೆ.


ಪತಿ ನಾಗೇಶ್ ಗೆ ಡೈವೋರ್ಸ್ ಕೊಡು, ನಾನು ನಿನಗೆ ಮುಸ್ಲಿಂ ಹುಡುಗನ ಜೊತೆ ಮದುವೆ ಮಾಡುತ್ತೇನೆ ಎಂದು ನೂರ್ ಜಹಾನ್ ಹೇಳಿದ್ದಳು. ಇದಕ್ಕೆ ಸಂಬಂಧಿಸಿ ನೂರ್ ಜಹಾನ್ ಳನ್ನು ಬಂಧಿಸಲಾಗಿದೆ. ನೂರ್ ಜಹಾನ್ ಮುಸ್ಲಿಮರ ಮದುವೆ ಬ್ರೋಕರ್ ಆಗಿ ಕೆಲಸ ಮಾಡತ್ತಿದ್ದಳು ಎಂದು ಪೊಲೀಸ್ ಕಮಿಷನರ್ ತಿಳಿಸಿದ್ದಾರೆ.

 

Also Read  ಗಂಡಿಬಾಗಿಲು ಮದ್ರಸದಲ್ಲಿ ಪ್ರಾರ್ಥನಾ ದಿನಾಚರಣೆ

ಮೂಲತಃ ಬಾಗಲಕೋಟೆ ಜಿಲ್ಲೆ ಬೀಳಗಿ ತಾಲೂಕಿನ ಸುನಗ ಗ್ರಾಮದ ನಿವಾಸಿಗಳಾಗಿದ್ದ ಇವರು ಎಂಟು ವರ್ಷಗಳಿಂದ ಪಾಂಡೇಶ್ವರ ಪೊಲೀಸ್‌ ಠಾಣಾ ವ್ಯಾಪ್ತಿಯ ಮೋರ್ಗನ್ಸ್‌ ಗೇಟ್‌ನ ಜೆಪ್ಪು ಮಾರ್ಕೆಟ್‌ ಬಳಿಯ ಮನೆಯಲ್ಲಿ ವಾಸವಾಗಿದ್ದರು. ಬುಧವಾರದಂದು ಬೆಳಗ್ಗೆ 11 ಗಂಟೆಯ ವೇಳೆಗೆ ನಾಗೇಶ್‌ ಪಕ್ಕಾಸಿಗೆ ನೇಣುಬಿಗಿದ ಸ್ಥಿತಿಯಲ್ಲಿದ್ದರೆ, ವಿಜಯಲಕ್ಷ್ಮೀ ಮತ್ತು ಇನ್ನೊಂದು ಮಗು ಹಾಸಿಗೆ ಮೇಲೆ ಹಾಗೂ ಮತ್ತೊಂದು ಮಗು ನೆಲದ ಮೇಲೆ ಬಿದ್ದುಕೊಂಡಿತ್ತು ಎನ್ನಲಾಗಿದೆ. ಪತಿ ನಾಗೇಶ್‌ ಶಿರಗುಪ್ಪಿ, ಪತ್ನಿ ಹಾಗೂ ಮಕ್ಕಳನ್ನು ಕೊಲೆಗೈದು ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದರು.

 

 

error: Content is protected !!
Scroll to Top