ಗುರುಪುರ ಸೇತುವೆ ಬಳಿ ಬೈಕ್ ನಿಲ್ಲಿಸಿ ಕಾಣೆಯಾಗಿದ್ದ ಯುವಕನ ಮೃತದೇಹ ಪತ್ತೆ..!



(ನ್ಯೂಸ್ ಕಡಬ) newskadaba.com ಮಂಗಳೂರು, ಡಿ. 11. ಗುರುಪುರ ಸೇತುವೆಯಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ ಯುವಕನ ಮೃತದೇಹವು ಗುರುಪುರ ಸಮೀಪದ ಬೈಲುಪೇಟೆ ಎಂಬಲ್ಲಿ ಪತ್ತೆಯಾಗಿದೆ.







ಮೃತ ಯುವಕನನ್ನು ವಾಮಂಜೂರಿನ ಯೋಗಿಶ್ ಯಾನೆ ಮುನ್ನ ಎಂದು ಗುರುತಿಸಲಾಗಿದೆ. ಈತ ಬುಧವಾರ ಸಂಜೆಯಿಂದ ಕಾಣೆಯಾಗಿದ್ದು, ಗುರುವಾರದಂದು ಬೆಳಗ್ಗೆ ಗುರುಪುರ ನದಿ ಸೇತುವೆಯ ಬಳಿ ಅವರ ಚಪ್ಪಲಿ ಹಾಗೂ ಬೈಕ್ ಪತ್ತೆಯಾಗಿದ್ದು, ಇದರ ಹಿನ್ನೆಲೆ ಅಗ್ನಿಶಾಮಕ ದಳ ಹಾಗು ಬಜ್ಪೆ ಪೊಲೀಸರ ಸ್ಥಳೀಯರ ಸಹಕಾರದಿಂದ ಹುಡುಕಾಟ ನಡೆಸಿದ್ದು, ಎರಡು ದಿನಗಳ ಬಳಿಕ ಶುಕ್ರವಾರದಂದು ಅವರ ಮೃತದೇಹ ಬೈಲುಪೇಟೆ ಎಂಬಲ್ಲಿ ಪತ್ತೆಯಾಗಿದೆ‌. ಈ ಕುರಿತು ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






 

 

 

error: Content is protected !!
Scroll to Top