ಲಾವತ್ತಡ್ಕ: ಕಾಡಾನೆ ದಾಳಿ ➤ ತೆಂಗು, ಬಾಳೆ ಕೃಷಿಗೆ ಹಾನಿ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಡಿ. 11. ನೂಜಿಬಾಳ್ತಿಲ ಗ್ರಾಮದ ಲಾವತ್ತಡ್ಕ ಪರಿಸರದ ಅರಣ್ಯ ಪ್ರದೇಶದಂಚಿನಲ್ಲಿ ಕಾಡಾನೆಯ ದಾಳಿ ಮುಂದುವರಿದಿದ್ದು, ಲಾವತ್ತಡ್ಕ ನಿವಾಸಿ ವರ್ಗೀಸ್ ತೋಮಸ್ ಎಂಬವರ ತೋಟಕ್ಕೆ ನುಗ್ಗಿದ ಆನೆಯು ಕೃಷಿಗೆ ಹಾನಿಯನ್ನುಂಟು ಮಾಡಿದ ಘಟನೆ ವರದಿಯಾಗಿದೆ.

ವರ್ಗೀಸ್ ತೋಮಸ್ ಎಂಬವರ ತೋಟಕ್ಕೆ ಕಾಡಾನೆ ದಾಳಿ ನಡೆಸಿ ತೆಂಗು ಹಾಗೂ ಬಾಳೆ ಗಿಡಗಳನ್ನು ಕೆಡವಿ ಹಾಕಿದ್ದು, ಅಪಾರ ಪ್ರಮಾಣದಲ್ಲಿ ನಷ್ಟ ಉಂಟಾಗಿರುವುದು ತಿಳಿದುಬಂದಿದೆ.

 

 

error: Content is protected !!
Scroll to Top