ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೆ ತಂದೇ ತರುತ್ತೇವೆ ➤ ಬಿಎಸ್ ವೈ ಹೇಳಿಕೆ

(ನ್ಯೂಸ್ ಕಡಬ) newskadaba.com ಶಿವಮೊಗ್ಗ, ಡಿ. 10. ಕಾಂಗ್ರೆಸ್ ಯಾವಾಗಲೂ, ಎಲ್ಲವನ್ನೂ ವಿರೋಧಿಸುತ್ತದೆ,ಆದರೆ ನಾವಂತೂ ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೆ ತಂದೇ ತರುತ್ತೇವೆ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಶುಕ್ರವಾರದಂದು ಹೇಳಿಕೆ ನೀಡಿದ್ದಾರೆ.


ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇನ್ನು ಮುಂದೆ ಯಾವುದೇ ರೀತಿಯಲ್ಲಿ ಮತಾಂತರವಾಗದಂತೆ ಎಚ್ಚರ ವಹಿಸುತ್ತೇವೆ, ಇದಕ್ಕೆ ಬೇಕಾಗಿ ಇನ್ನೂ ಬಲವಾದ ಕಾಯ್ದೆಯನ್ನು ಜಾರಿ ಮಾಡುತ್ತೇವೆ ಎಂದರು. ಇಂದು ವಿಧಾನ ಪರಿಷತ್ ಚುನಾವಣೆ ನಡೆಯುತ್ತಿದ್ದು, ಪರಿಷತ್ ನ 20 ಕ್ಷೇತ್ರಗಳ ಪೈಕಿ ಕನಿಷ್ಟ 15 ಕ್ಷೇತ್ರದಲ್ಲಿ ಗೆದ್ದೇ ಗೆಲ್ಲುತ್ತೇವೆ, ಶಿವಮೊಗ್ಗದಲ್ಲಿ ಅರುಣ್ ಸೇರಿದಂತೆ 15 ಸ್ಥಾನವನದನು ನೂರಕ್ಕೆ ನೂರು ಗೆಲ್ಲುತ್ತೇವೆ. ಇದರಿಂದ ವಿಧಾನ ಪರಿಷತ್ ನಲ್ಲಿ ನಮಗೆ ಸ್ಪಷ್ಟ ಬಹುಮತ ಬರುತ್ತದೆ ಎಂದರು. ಟೀಕೆ ಮಾಡುವವರಿಗೆ ಚುನಾವಣಾ ಫಲಿತಾಂಶದಲ್ಲಿ ಜನರೇ ಉತ್ತರ ಕೊಡುತ್ತಾರೆ. ಅನಗತ್ಯ ಟೀಕೆ-ಟಿಪ್ಪಣಿ ಮಾಡುವ ಸಿದ್ದರಾಮಯ್ಯನಂತವರಿಗೆ ನಾವು ಉತ್ತರ ಕೊಡುವುದಿಲ್ಲ. ಬದಲಾಗಿ ಇದಕ್ಕೆಲ್ಲಾ ಜನರೇ ಅವರಿಗೆ ಉತ್ತರ ಕೊಟ್ಟೇ ಕೊಡುತ್ತಾರೆ ಎಂದರು.

Also Read  7ನೇ ವೇತನ ಆಯೋಗ ಜಾರಿಗೆ ಬದ್ಧ ಎಂದ ಬೊಮ್ಮಾಯಿ ➤ ಪ್ರತಿಭಟನೆ ನಿಲ್ಲಿಸ್ತಾರಾ ಸರ್ಕಾರಿ ನೌಕರರು ?

 

 

error: Content is protected !!