ಆಲಂಕಾರು: ಮೊಗೇರ ಸಂಘದ ವತಿಯಿಂದ ಹೆಲಿಕಾಪ್ಟರ್ ದುರಂತದಲ್ಲಿ ಮಡಿದ ಸೇನಾಧಿಕಾರಿಗಳಿಗೆ ನುಡಿನಮನ

(ನ್ಯೂಸ್ ಕಡಬ) newskadaba.com ಅಲಂಕಾರು, ಡಿ. 10. ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟ ಭಾರತೀಯ ಸೇನಾ ಪಡೆಯ ಮುಖ್ಯಸ್ಥ ಬಿಪಿನ್ ರಾವತ್ ಸೇರಿದಂತೆ 13 ಮಂದಿ ಸೈನಿಕರಿಗೆ ಮೊಗೇರ ಸಂಘ ಅಲಂಕಾರು ಮಂಡಲದ ವತಿಯಿಂದ ನುಡಿನಮನ ಸಲ್ಲಿಸಲಾಯಿತು.


ಈ ಸಂದರ್ಭ ಮಾತನಾಡಿದ ಮಹಾಬಲ ಪಡುಬೆಟ್ಟು, ಸೇನಾ ಪಡೆಯ ಮುಖ್ಯಸ್ಥ ಬಿಪಿನ್ ರಾವತ್ ಅವರು ದೇಶದ ದೊಡ್ಡ ಸಂಪತ್ತಾಗಿದ್ದರು. ಸುಮಾರು ನಾಲ್ಕು ದಶಕಗಳಿಂದ ಭಾರತೀಯ ಸೇನೆಯಲ್ಲಿ ಅಪ್ರತಿಮ ಸೇವೆ ಸಲ್ಲಿಸುತ್ತಾ ಸೇನೆಯ ಮೂರು ಪಡೆಯ ಮುಖ್ಯಸ್ಥರಾಗಿ ತಮ್ಮ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದರು‌. ಬಿಪಿನ್ ರಾವತ್ ಸೇರಿದಂತೆ ಸೇನೆಯ ಅಧಿಕಾರಿಗಳು ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟಿರುವುದು ಇಡೀ ದೇಶವನ್ನೇ ತಲ್ಲಣಗೊಳಿಸಿದೆ‌. ದುರಂತದಲ್ಲಿ ಮಡಿದವರ ಕುಟುಂಬ ಸದಸ್ಯರಿಗೆ ದುಃಖ ಸಹಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಪ್ರಾರ್ಥಿಸಿದರು. ಈ ಸಂದರ್ಭ ಕರಿಯ ಗಾಣಂತಿ, ದಿನೇಶ್ ಗಾಣಂತಿ, ಪ್ರಸಾದ್ ಕುಕ್ಕೆಜಾಲು, ಆನಂದ ಹೊಸ್ಮಠ, ಶೀನಪ್ಪ ದೇರೋಡಿ, ಶೀನಪ್ಪ ನೆಕ್ಕಿಲಾಡಿ, ಕೃಷ್ಣ ಗಾಣಂತಿ ಮೊದಲಾದವರು ಉಪಸ್ಥಿತರಿದ್ದರು.

Also Read  ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ಆರೋಪ ➤ ತಾಯಿ ಸಹಿತ ಮೂವರಿಗೆ ಶಿಕ್ಷೆ ಪ್ರಕಟ

 

error: Content is protected !!
Scroll to Top