ವಕೀಲ ರಾಜೇಶ್ ಭಟ್ ಪ್ರಕರಣ ➤ ಪತ್ನಿ ಸಹಿತ ಮತ್ತಿಬ್ಬರ ಬಂಧನ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ. 10. ಕಾನೂನು ವಿದ್ಯಾರ್ಥಿನಿಯೋರ್ವಳಿಗೆ ಲೈಂಗಿಕ ಕಿರುಕುಳ ನೀಡಿ, ತಲೆಮರೆಸಿಕೊಂಡಿರುವ ಆರೋಪಿಯ ಪತ್ನಿ ಹಾಗೂ ಆರೋಪಿಗೆ ಸಹಕರಿಸಿದ ಅಚ್ಯುತ ಭಟ್ ಎಂಬಾತನ ಮಗ ಅಲೋಕ್ ನನ್ನು ಕೂಡಾ ಪೊಲೀಸರು ಬಂಧಿಸಿದ ಘಟನೆ ವರದಿಯಾಗಿದೆ.

ಆರೋಪಿ ವಕೀಲ ಕೆ.ಎಸ್.ಎನ್ ರಾಜೇಶ್ ಭಟ್ ವಿರುದ್ದ ಲೈಂಗಿಕ ಕಿರುಕುಳ ನಿಡಿರುವ ಕುರಿತು ನಗರದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇದರ ಬೆನ್ನಲ್ಲೇ ಆರೋಪಿ ತಲೆ ಮರೆಸಿಕೊಂಡಿದ್ದಾನೆ. ಇದಕ್ಕೆ ಸಹಕರಿಸಿದ್ದ ಆರೋಪದ ಮೇರೆಗೆ ಈ ಹಿಂದೆ ಅನಂತ್ ಭಟ್ ಎಂಬಾತನನ್ನು ಬಂಧಿಸಲಾಗಿತ್ತು. ಈ ಮಧ್ಯೆ ಇನ್ನೋರ್ವ ಆರೋಪಿ ಅಲೋಕ್ ಎಂಬಾತ ಆರೋಪಿ ರಾಜೇಶ್ ಭಟ್ ಗೆ ಸಹಕಾರ ನೀಡುತ್ತಿದ್ದರು ಎನ್ನಲಾಗಿದ್ದು, ಈ ಬಗ್ಗೆ ಮಾಹಿತಿ ಕಲೆ ಹಾಕಿದ ಪೊಲೀಸರು ಗುರುವಾರ ಅಚ್ಚುತ ಭಟ್ ಅವರ ಮಗ ಅಲೋಕ್ ಮತ್ತು ರಾಜೇಶ್ ಭಟ್ ಅವರ ಪತ್ನಿಯನ್ನೂ ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಅವರನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಗಿದೆ.

Also Read  ಉಡುಪಿ: ಜಿಲ್ಲೆಯಲ್ಲಿ ಸರಕಾರಿ ಮೆಡಿಕಲ್ ಕಾಲೇಜಿಗಾಗಿ ಹೋರಾಟದ ಹಿನ್ನೆಲೆ ➤ ಸಿಎಫ್ಐ ವತಿಯಿಂದ ಮಾಜಿ ಸಚಿವ, ಸಾಮಾಜಿಕ ಕಾರ್ಯಕರ್ತ ಹಾಗೂ ಪತ್ರಕರ್ತರ ಭೇಟಿ

 

error: Content is protected !!
Scroll to Top