ಕೊಯಿಲ: ಮಹಿಳೆ ಆತ್ಮಹತ್ಯೆ ➤ ಕಡಬ ಠಾಣೆಯಲ್ಲಿ ಪ್ರಕರಣ ದಾಖಲು

(ನ್ಯೂಸ್ ಕಡಬ) newskadaba.com ಕಡಬ, ಡಿ. 09. ಮಹಿಳೆಯೋರ್ವರು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಡಬ ಠಾಣಾ ವ್ಯಾಪ್ತಿಯ ಕೊಯಿಲ ಗ್ರಾಮದ ಪಟ್ಟೆ ಎಂಬಲ್ಲಿ ನಡೆದಿದೆ.

 

ಆತ್ಮಹತ್ಯೆ ಮಾಡಿಕೊಂಡ ಮಹಿಳೆಯನ್ನು ಪಟ್ಟೆ ನಿವಾಸಿ ಅಂಗಾರ ಎಂಬವರ ಪತ್ನಿ ಹರಿಣಿ(41) ಎಂದು ಗುರುತಿಸಲಾಗಿದೆ. ಇವರು ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಯ ಕೋಣೆಯಲ್ಲಿ ಛಾವಣಿಯ ಬಿದಿರಿನ ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಗಂಡನ ಕಿರುಕುಳ ಹಾಗೂ ಕೌಟುಂಬಿಕ ಕಲಹದ ಹಿನ್ನೆಲೆ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪ್ರಕರಣ ದಾಖಲಾಗಿದೆ.


ಹರಿಣಿಯವರನ್ನು ಹನ್ನೆರಡು ವರ್ಷಗಳ ಹಿಂದೆ ಪುತ್ತೂರಿನ ಪರ್ಲಡ್ಕದ ಕೋಡಿಬಾಲ್ ನಿವಾಸಿ ಅಂಗಾರ ಎಂಬವರಿಗೆ ಮದುವೆ ಮಾಡಿಕೊಡಲಾಗಿತ್ತು. ಆದರೆ ಅಂಗಾರ ವಿಪರೀತ ಮದ್ಯಪಾನ ಸೇವನೆಯ ಚಟ ಹೊಂದಿದ್ದು, ಹರಿಣಿಗೆ ದೈಹಿಕ ಹಿಂಸೆಯನ್ನು ಕೂಡಾ ನೀಡುತ್ತಿದ್ದರು ಎನ್ನಲಾಗಿದೆ. ಇದನ್ನು ಸಹಿಸದ ಹರಿಣಿ, ಎರಡು ವರ್ಷಗಳಿಂದ ತವರು ಮನೆ ಪರ್ಲಡ್ಕದ ಕೋಡಿಬಾಲ್ ನಲ್ಲಿ ವಾಸವಾಗಿದ್ದರು. ಆದರೆ ಇತ್ತೀಚೆಗೆ ಗಂಡನೊಂದಿಗೆ ವಾಸ ಮಾಡಿಕೊಂಡಿದ್ದು, ಮತ್ತೆ ಪತಿಯ ಹಿಂಸೆ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಮೃತಳ ಸಹೋದರ ಬಾಬು ಎಂಬವರು ದೂರು ನೀಡಿದ್ದು, ಇದರಂತೆ ಕಡಬ ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Also Read  ಬಾಕಿ ವಿದ್ಯುತ್ ಬಿಲ್​​ ಕಟ್ಟುವಂತೆ ಮೊಬೈಲ್‌ ಗೆ ಲಿಂಕ್‌ ! - 5.48 ಲಕ್ಷ ರೂ. ಡ್ರಾ ಮಾಡಿದ ವಂಚಕರು

 

error: Content is protected !!
Scroll to Top