ಅಡುಗೆ ಅನಿಲ ವಿತರಕರಿಗೆ ಹೆಚ್ಚುವರಿ ಹಣ ನೀಡದಂತೆ ದ.ಕ. ಜಿಲ್ಲಾಧಿಕಾರಿ ಸೂಚನೆ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ. 09. ಅಡುಗೆ ಅನಿಲವನ್ನು ಮನೆ ಮನೆಗೆ ಪೂರೈಸುವ ಸಂದರ್ಭದಲ್ಲಿ ಅನಿಲ ವಿತರಕರು ಗ್ರಾಹಕರಿಂದ ಹೆಚ್ಚಿನ ದರವನ್ನು ವಸೂಲಿ ಮಾಡುವಂತಿಲ್ಲ. ಗ್ರಾಹಕರು ಕೂಡಾ ಹೆಚ್ಚಿನ ದರವನ್ನು ನೀಡಬೇಕಾಗಿಲ್ಲ. ಒಂದು ವೇಳೆ ಹಣಕ್ಕಾಗಿ ಒತ್ತಾಯಿಸಿದರೆ ದೂರು ಸಲ್ಲಿಸಬಹುದು ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.

 

ಅನಿಲ ವಿತರಕರು ನಿಗದಿ ಪಡಿಸಿದ ದರಕ್ಕಿಂತ ಹೆಚ್ಚುವರಿ ದರವನ್ನು ವಸೂಲಿ ಮಾಡಿದಲ್ಲಿ ಸಹಾಯಕ ನಿರ್ದೇಶಕರು, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ದ.ಕ. ಜಿಲ್ಲಾಧಿಕಾರಿಗಳ ಕಚೇರಿ ಮಂಗಳೂರು
(ದೂ.ಸಂ: 0824-2220571 ) ಈ ವಿಳಾಸಕ್ಕೆ ದೂರನ್ನು ಸಲ್ಲಿಸಬಹುದು ಎಂದು ಸೂಚಿಸಿದ್ದಾರೆ.

Also Read  ಜಿಲ್ಲಾ ಗೃಹರಕ್ಷಕ ದಳ ಕಚೇರಿಯಲ್ಲಿ ಶ್ರದ್ಧಾಂಜಲಿ ಸಭೆ

 

 

 

error: Content is protected !!
Scroll to Top