ಮಂಗಳೂರು: ಪತ್ನಿ ಮುಸ್ಲಿಂ ಧರ್ಮಕ್ಕೆ ಮತಾಂತರವಾಗುವ ಭೀತಿ ➤ ವಿಷವುಣಿಸಿ ಹೆಂಡತಿ ಮಕ್ಕಳನ್ನು ಕೊಂದ ಪತಿ..!

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ. 08. ಪತ್ನಿ ಮುಸ್ಲಿಂ ಧರ್ಮಕ್ಕೆ ಮತಾಂತರಗೊಳ್ಳುತ್ತಾಳೆ ಎಂದು ಹೆದರಿದ ಪತಿಯೋರ್ವ ಹೆಂಡತಿ ಮಕ್ಕಳಿಗೆ ವಿಷವುಣಿಸಿ, ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳೂರು ‌ನಗರದ ಮೋರ್ಗನ್ಸ್ ಗೇಟ್ ಸಮೀಪ ನಡೆದಿದೆ.

 

ಮೃತಪಟ್ಟವರನ್ನು ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಸುನಗ್ ಗ್ರಾಮದ ನಾಗೇಶ್ ಶೇರಿಗುಪ್ಪ (30), ವಿಜಯಲಕ್ಷ್ಮಿ(26) ಮಕ್ಕಳಾದ ಸಪ್ನ (8) ಹಾಗೂ ಸಮರ್ಥ್ (4) ಎಂದು ಗುರುತಿಸಲಾಗಿದೆ. ಇವರು ಮೋರ್ಗನ್ಸ್ ಗೇಟ್ ಬಳಿ ಬಾಡಿಗೆ ಮನೆಯಲ್ಲಿ ವಾಸವಿದ್ದು, ಪತಿ ನಾಗೇಶ್ ಚಾಲಕನಾಗಿ ಕೆಲಸ ಮಾಡುತ್ತಿದ್ದರೆ ವಿಜಯಲಕ್ಷ್ಮಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.


ಪತ್ನಿ ವಿಜಯಲಕ್ಷ್ಮಿ ಗೆ ಪತಿ ನಾಗೇಶ್ ಕಿರುಕುಳ ನೀಡುತ್ತಿದ್ದು, ಇದರಿಂದ ನೊಂದಿದ್ದ ವಿಜಯಲಕ್ಷ್ಮಿ ಅಕ್ಟೋಬರ್ ತಿಂಗಳಲ್ಲಿ ಮಕ್ಕಳೊಂದಿಗೆ ನಾಪತ್ತೆಯಾಗಿದ್ದಳು. ಬಳಿಕ ಆಕೆಯೇ ಬಂದು ಗಂಡನೊಂದಿಗೆ ವಾಸವಾಗಿದ್ದಳು. ಈಕೆ ನೂರ್ ಜಹಾನ್ ಎಂಬ ಮಹಿಳೆಯೊಂದಿಗೆ ಕೆಲಸ ಮಾಡುತ್ತಿದ್ದ ಹಿನ್ನೆಲೆ, ಪತಿ ನಾಗೇಶ್ ಗೆ ಈಕೆ ಮುಸ್ಲಿಂ ಧರ್ಮಕ್ಕೆ ಮತಾಂತರವಾಗುವ ಆತಂಕ ಶುರುವಾಗಿದೆ. ಅವಳ ವರ್ತನೆಯನ್ನು ಗಮನಿಸಿದ ಆತ ಕೆಲಸಕ್ಕೆ ಹೋಗದಂತೆ ಸೂಚಿಸಿದ್ದು, ಈ ವಿಚಾರವಾಗಿ ಇಬ್ಬರ ನಡುವೆ ‌ಕಲಹ ನಡೆದಿತ್ತು. ಮಂಗಳವಾರದಂದು ರಾತ್ರಿ ಫ್ರೈಡ್ ರೈಸ್ ಪಾರ್ಸೆಲ್ ತಂದಿದ್ದ ಪತಿ ಅದಕ್ಕೆ ವಿಷ ಬೆರೆಸಿ ಪತ್ನಿ ಹಾಗೂ ಮಕ್ಕಳಿಗೆ ನೀಡಿದ್ದಾನೆ. ಇದನ್ನು ಸೇವಿಸಿದ ಮೂವರು ಮೃತಪಟ್ಟಿದ್ದು, ಬಳಿಕ ಈತ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಘಟನಾ ಸ್ಥಳದಲ್ಲಿ ಈತನ ಡೆತ್ ನೋಟ್ ಲಭ್ಯವಾಗಿದ್ದು, ಇದರಲ್ಲಿ ಪತ್ನಿ ಮುಸ್ಲಿಂ ಧರ್ಮಕ್ಕೆ ಮತಾಂತರವಾಗುವ ಭೀತಿಯಿರುವುದರಿಂದ ಈ ಕೃತ್ಯವೆಸಗಿರುವುದಾಗಿ ಬರೆದಿಟ್ಟಿದ್ದಾನೆ.

Also Read  ಪುತ್ತೂರು ತಾಲೂಕು ಮಟ್ಟದ ಭಾಷಣ ಸ್ಪರ್ಧೆ

 

 

error: Content is protected !!
Scroll to Top