ಭಾಷಣದ ವೇಳೆ ಗುಸುಗುಸು ಎಂದ ಪಿಎಸ್ಐ ಹಾಗೂ ಸಿಬ್ಬಂದಿ ➤ ಹೊರಹೋಗಿ ಎಂದು ಗರಂ ಆದ ಸಿಎಂ..!

(ನ್ಯೂಸ್ ಕಡಬ) newskadaba.com ಬೀದರ್, ಡಿ. 06. ಭಾಷಣ ಮಾಡುತ್ತಿದ್ದ ಸಂದರ್ಭ ಅಶಿಸ್ತಿನಿಂದ ನಡೆದುಕೊಂಡ ಲೇಡಿ ಪಿಎಸ್​ಐ ಸೇರಿದಂತೆ ಇತರೆ ಪೊಲೀಸ್​ ಸಿಬ್ಬಂದಿಯನ್ನು ಹೊರ ಹೋಗಿ ಎಂದು ಸಿಎಂ ಬೊಮ್ಮಾಯಿ ಅವರು ಖಡಕ್​ ಸೂಚನೆ ನೀಡಿದ ಘಟನೆ ಬೀದರ್​ ಜಿಲ್ಲೆಯಲ್ಲಿ ನಡೆದಿದೆ.


ಇಲ್ಲಿನ ಘಾಳೆ ಫಂಕ್ಷನ್ ಹಾಲ್‌ನಲ್ಲಿ ಪರಿಷತ್ ಚುನಾವಣೆ ಪ್ರಚಾರ ಸಭೆಯಲ್ಲಿ ಭಾಷಣ ಮಾಡುತ್ತಿದ್ದ ವೇಳೆ ಗಸ್ತಿನಲ್ಲಿದ್ದ ಪೊಲೀಸರು ಗುಸು.. ಗುಸು.. ಮಾತನಾಡುತ್ತಿದ್ದ ಶಬ್ದ ಕೇಳಿಸಿದ್ದು, ಇದರಿಂದ ಗರಂ ಆದ ಸಿಎಂ, ‘ನಿಮ್ಗಳ ಅಗತ್ಯವಿಲ್ಲ. ನಮ್ಮ ಕಾರ್ಯಕರ್ತರು ಎಲ್ಲಾ ನೋಡ್ಕೊಳ್ತಾರೆ. ನೀವು ಹೊರಗೆ ಹೋಗಿ’ ಎಂದು ಸಮಾವೇಶದ ವೇದಿಕೆಯಲ್ಲೇ ಮಹಿಳಾ ಪಿಎಸ್​ಐ ಸೇರಿದಂತೆ ಪೊಲೀಸ್ ಸಿಬ್ಬಂದಿಯನ್ನು ಹೊರ ಹೋಗುವಂತೆ ತಿಳಿಸಿದ್ದಾರೆ. ಪಕ್ಷದ ಕಾರ್ಯಕರ್ತರು ಸಿಎಂ ಅವರನ್ನು ಸನ್ಮಾನಿಸಲು ವೇದಿಕೆಗೆ ಬರುವುದನ್ನು ತಡೆದ ಪೊಲೀಸರ ವರ್ತನೆ ಹಾಗೂ ಭಾಷಣದ ಆರಂಭಕ್ಕೆ ಮುನ್ನವೇ ಮಹಿಳಾ ಪಿಎಸ್ಐ ಅನವಶ್ಯಕವಾಗಿ ಸುತ್ತಾಡುತ್ತಿರುವುದನ್ನು ಗಮನಿಸಿದ ಸಿಎಂ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.

Also Read  ಭ್ರಷ್ಟ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ಬೇಟೆ: ರಾಜ್ಯದ 8 ಕಡೆಗಳಲ್ಲಿ ದಾಳಿ

 

error: Content is protected !!
Scroll to Top