ಎಣ್ಮೂರು: ನೂತನ ಶಾದಿ ಮಹಲ್ ಉದ್ಘಾಟನೆ ಹಾಗೂ ಬಡ ಹೆಣ್ಣು ಮಕ್ಕಳ ಮದುವೆ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಸುಳ್ಯ, ಡಿ. 06. ತಾಲೂಕಿನ ಎಣ್ಮೂರು ಐವತ್ತೂಕ್ಲು ರಹ್ಮಾನಿಯಾ ಕೇಂದ್ರ ಜುಮಾ ಮಸ್ಜಿದ್‌ನ ಅಧೀನದಲ್ಲಿರುವ ನೂತನ ಶಾದಿ ಮಹಲ್ ಉದ್ಘಾಟನೆ ಹಾಗೂ ಮುಸ್ಲಿಂ ಯುವಜನ ಸಂಘ ಇದರ ಆಶ್ರಯದಲ್ಲಿ ಬಡ ಹೆಣ್ಣು ಮಕ್ಕಳ ವಿವಾಹ ಮತ್ತು ಶಂಸುಲ್ ಉಲಮಾ ಹಾಗೂ ತಾಜುಲ್ ಉಲಮಾ ಅನುಸ್ಮರಣೆ ಕಾರ್ಯಕ್ರಮವು ನಡೆಯಿತು.

ನೂತನ ಶಾದಿ ಮಹಲ್‌ ಅನ್ನು ಓಲೆಮುಂಡೋವು ಮಹ್ಮೂದುಲ್ ಫೈಝಿ ಉದ್ಘಾಟಿಸಿದರು. ಬಳಿಕ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಸ್ಜಿದ್‌ನ ಗೌರವಾಧ್ಯಕ್ಷ ಹಾಜಿ ಕುಂಞಿಪಳ್ಳಿ ಐವತ್ತೊಕ್ಲು ವಹಿಸಿದ್ದರು. ಈ ಸಂದರ್ಭ ಜುಮಾ ಮಸ್ಜಿದ್‌ನ ಅಧ್ಯಕ್ಷ ಇಸ್ಮಾಯಿಲ್ ಕೆ.ಎಂ, ಸ್ಥಳೀಯ ಖತೀಬ್ ಅಬ್ದುಲ್ಲ ಮದನಿ ರೆಂಜ, ಶಂಸುದ್ದೀನ್ ಮುಸ್ಲಿಯಾರ್ ಉಪಸ್ಥಿತರಿದ್ದರು. ಬಳಿಕ ನಡೆದ ಅನುಸ್ಮರಣಾ ಕಾರ್ಯಕ್ರಮ ಹಾಗೂ ಬಡ ಹೆಣ್ಮಕ್ಕಳ ಮದುವೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಂವೈಎಸ್ ಅಧ್ಯಕ್ಷ ಹಮೀದ್ ಮರಕ್ಕಡ ವಹಿಸಿದ್ದರು. ಕಜೆ ನಿಂತಿಕಲ್ಲು ಜುಮಾ ಮಸ್ಜಿದ್ ಖತೀಬ್ ಜಾಫರ್ ಸಅದಿ ಮುಖ್ಯ ಭಾಷಣ ಮಾಡಿದರು. ಈ ಸಂದರ್ಭ ನವ ಸನದುದಾರಿಗಳನ್ನು ಸನ್ಮಾನಿಸಲಾಯಿತು. ಮುಸ್ತಫ ಸಅದಿ ಕೊಳ್ತಂಕರೆ ಸ್ವಾಗತಿಸಿದರು. ಎಂವೈಎಸ್ ಕಾರ್ಯದರ್ಶಿ ರಫೀಕ್ ಟಿ.ಎಸ್. ವಂದಿಸಿದರು. ಸಿ.ಎಂ.ರಫೀಕ್ ನಿರೂಪಿಸಿದರು.

Also Read  ಕಲ್ಲುಗುಂಡಿ: ಸಚಿವ ಅಂಗಾರರಿಗೆ ಅಭಿನಂದನಾ ಕಾರ್ಯಕ್ರಮ

 

 

error: Content is protected !!
Scroll to Top