ಕೊರೋನಾ ಪ್ರಕರಣ ತೀವ್ರ ಹೆಚ್ಚಾದಲ್ಲಿ ಶಾಲಾ- ಕಾಲೇಜು ಬಂದ್ ಗೆ ಸಿದ್ದ ➤ ಸಚಿವ ಬಿ.ಸಿ ನಾಗೇಶ್

(ನ್ಯೂಸ್ ಕಡಬ) newskadaba.com ಬೆಂಗಳೂರು, ಡಿ. 06. ರಾಜ್ಯದಲ್ಲಿ ಕೊರೋನಾ ಪ್ರಕರಣ ಹೆಚ್ಚಳವಾಗುತ್ತಿರುವ ಹಿನ್ನೆಲೆ, ಶಾಲೆಗಳನ್ನು ಬಂದ್ ಮಾಡುವ ಕುರಿತು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಬಿಸಿ ನಾಗೇಶ್ ಮಹತ್ವದ ಹೇಳಿಕಯೊಂದನ್ನು ನೀಡಿದ್ದಾರೆ.


ಈ ಕುರಿತು ಸುದ್ದಿಗಾರಗೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕೊರೋನಾ ಪ್ರಕರಣಗಳು ಹೆಚ್ಚಾದರೆ ಶಾಲೆಗಳನ್ನು ಬಂದ್ ಮಾಡಲು ಸಿದ್ದ. ಈ ಕುರಿತು ತಜ್ಞರೊಂದಿಗೆ ಪ್ರತಿದಿನ ವರದಿ ಪಡೆಯುತ್ತಿದ್ದೇವೆ. ವರದಿಯ ಪ್ರಕಾರ ಕೋವಿಡ್ ಪ್ರಕರಣದಲ್ಲಿ ತೀವ್ರ ಹೆಚ್ಚಳ ಉಂಟಾದರೆ ಶಾಲೆಗಳನ್ನು ಬಂದ್ ಮಾಡಲು ಸಿದ್ದ. ಪೋಷಕರು ಯಾವುದೇ ರೀತಿ ಆತಂಕ ಪಡಬೇಡಿ ಎಂದು ಹೇಳಿದ್ದಾರೆ.

Also Read  ಮಂಗಳೂರು: ಪಾಸ್‌ಪೋರ್ಟ್ ದುರುಪಯೋಗ ➤‌ ಆರೋಪಿಗೆ 1 ವರ್ಷ ಜೈಲು ಶಿಕ್ಷೆ

 

 

 

error: Content is protected !!
Scroll to Top