ಸಹೋದರಿಯ ಶಿರಚ್ಚೇದ ಮಾಡಿದ ಸಹೋದರ..! ➤ ಮಗ ಹಾಗೂ ಕೃತ್ಯಕ್ಕೆ ಸಹಕರಿಸಿದ ತಾಯಿ ಅರೆಸ್ಟ್

(ನ್ಯೂಸ್ ಕಡಬ) newskadaba.com ಮುಂಬೈ, ಡಿ. 06. ಹದಿಹರೆಯದ ಯುವಕನೋರ್ವ ತನ್ನ ಸಹೋದರಿಯ ಶಿರಚ್ಛೇದ ಮಾಡಿದ ಮನಕಲಕುವ ಘಟನೆ ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯಲ್ಲಿ ನಡೆದಿದೆ.

ಸ್ವತಃ ತಾಯಿಯೂ ಮಗಳ ಕಾಲನ್ನು ಬಿಗಿಯಾಗಿ ಹಿಡಿದು ಶಿರಚ್ಛೇದವನ್ನು ಮಾಡಲು ಸಹಕರಿಸಿದ್ದಾಳೆ. ಅಲ್ಲದೇ ಶಿರಚ್ಚೇದದ ಬಳಿಕ ಯುವಕ ಹಾಗೂ ತಾಯಿಯು ಓಡಿಹೋಗುವ ಮೊದಲು ಕತ್ತರಿಸಿದ ತಲೆಯನ್ನು ಅಂಗಳಕ್ಕೆ ತೆಗೆದುಕೊಂಡು ಬಂದು ಗಾಳಿಯಲ್ಲಿ ಬೀಸಿ, ರಕ್ತವನ್ನು ಚೆಲ್ಲಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಭಾನುವಾರ ಯುವತಿಯ ಮನೆಗೆ ಭೇಟಿ ನೀಡಿದಾಗ ಕೃತ್ಯ ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದೀಗ ಬಾಲಕನನ್ನು ಮತ್ತು ಆತನ ತಾಯಿಯನ್ನು ಬಂಧಿಸಲಾಗಿದೆ.

Also Read  ರೆಫ್ರಿಜರೇಟರ್ ಸ್ಪೋಟ- ಯುವತಿಯರಿಬ್ಬರು ಸ್ಥಳದಲ್ಲೇ ಮೃತ್ಯು..!

 

 

error: Content is protected !!
Scroll to Top