ಗೂನಡ್ಕ: ಐಪಿಎಲ್ ಪ್ರೆಡಿಕ್ಷನ್ 4 ವಿಜೇತರಿಗೆ ಪ್ರಶಸ್ತಿ ವಿತರಣಾ ಸಮಾರಂಭ

(ನ್ಯೂಸ್ ಕಡಬ) newskadaba.com ಸಂಪಾಜೆ, ಡಿ. 06. ಟೀಮ್ ಅಡ್ಮಿನ್ಸ್ ವಾಟ್ಸಾಪ್ ಗ್ರೂಪ್ ವತಿಯಿಂದ ನಡೆದ ಐಪಿಎಲ್ ಪ್ರೆಡಿಕ್ಷನ್ ಸೀಸನ್ 4 ವಿಜೇತರಿಗೆ ಪ್ರಶಸ್ತಿ ವಿತರಣಾ ಸಮಾರಂಭವು ರಾಯಲ್ ಫ್ರೆಂಡ್ಸ್ ಕ್ಲಬ್ ಗೂನಡ್ಕ ಕಚೇರಿಯಲ್ಲಿ ನಡೆಯಿತು.

ಐಪಿಎಲ್ ಪ್ರೆಡಿಕ್ಷನ್ ಸೀಸನ್ 4 2021 ಇದರ ಪ್ರಥಮ ಸ್ಥಾನವನ್ನು ಸಿರಾಜ್ ಕರಾವಳಿ, ದ್ವಿತೀಯ ಸಾಜಿದ್ ಐ ಜಿ, ತೃತೀಯ ಅಝರುದ್ದೀನ್ ಗೂನಡ್ಕ, ಚತುರ್ಥ ಝಹೀರ್ ಪೆರಾಜೆ ಪಡೆದುಕೊಂಡರು ಹಾಗೂ ಹಲವರು ಸಮಾಧಾನಕರ ಬಹುಮಾನವನ್ನು ಪಡೆದುಕೊಂಡರು. ಈ ಸಂದರ್ಭದಲ್ಲಿ ಟೀಮ್ ಅಡ್ಮಿನ್ಸ್ ತಂಡದ ಅಯ್ಯೂಬ್ ಗೂನಡ್ಕ, ಸಂಪಾಜೆ ಗ್ರಾಮ ಪಂಚಾಯತ್ ಸದಸ್ಯರಾದ ಪಿ.ಕೆ ಅಬುಸಾಲಿ ಗೂನಡ್ಕ, ಸವಾದ್ ಗೂನಡ್ಕ, ರಾಯಲ್ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷರಾದ ಸಾಜಿದ್ ಐ.ಜಿ, ಯುವ ಉದ್ಯಮಿ ಸಿರಾಜ್ ಕರಾವಳಿ, ರಹೀಮ್ ಬೀಜದಕಟ್ಟೆ, ಅಝೀಝ್ ದರ್ಕಾಸ್, ಜಾಬಿರ್ ಎಂ.ಬಿ, ಷರೀಫ್ ಸೆಟ್ಟಿಯಡ್ಕ, ಆರೀಫ್ ಟಿ ಎ, ಫಯಾಜ್ ಪಾಂಡಿ, ನೌಫಾಲ್ ಪುತ್ರಿ, ಸಿರಾಜ್ ಕೊಪ್ಪತಕಜೆ, ಆಶಿಕ್ ಜಿ.ಕೆ, ನೌಷು ಬೇತ್ರಿ ಮಿಕ್ದಾದ್, ಉನೈಸ್, ಅಝೀಝ್ ಶಾಲಾಬಳಿ, ಅಜ್ಮಲ್ ಸಿನಾನ್ ಪಾಂಡಿ ಮೊದಲಾದವರು ಉಪಸ್ಥಿತರಿದ್ದರು. ಕಾಸಿಮ್ ಪುತ್ರಿ ಸ್ವಾಗತಿಸಿ ಇಜಾಝ್ ಐ ಮ್ಯಾಕ್ಸ್ ಕಾರ್ಯಕ್ರವನ್ನು ನಿರೂಪಿಸಿದರು.

Also Read  ತುಳು ಭಾಷೆಯನ್ನು ಸಂವಿಧಾನ 8ನೇ ಪರಿಚ್ಛೇದಕ್ಕೆ ಸೇರಿಸುವಂತೆ ►ಜೈ ತುಳುನಾಡು ಸಂಘಟನೆ ವತಿಯಿಂದ ಟ್ವೀಟ್ ಅಭಿಯಾನ

error: Content is protected !!
Scroll to Top