ಪತ್ನಿಯನ್ನು ಕೊಚ್ಚಿ ಕೊಲೆಗೈದ ಪತಿ ಮಹಾಶಯ..! ➤ ಆರೋಪಿ ಅರೆಸ್ಟ್

(ನ್ಯೂಸ್ ಕಡಬ) newskadaba.com ಕಾಸರಗೋಡು, ಡಿ. 06. ಪತ್ನಿಯನ್ನು ಸ್ವತಃ ಪತಿಯೇ ಕಡಿದು ಕೊಲೆಗೈದ ಘಟನೆ ಬೇಡಡ್ಕ ಠಾಣಾ ವ್ಯಾಪ್ತಿಯ ಪೆರ್ಲಡ್ಕ ಎಂಬಲ್ಲಿ ನಡೆದಿದ್ದು, ಸೋಮವಾರದಂದು ಬೆಳಗ್ಗೆ ಪ್ರಕರಣ ಬೆಳಕಿಗೆ ಬಂದಿದೆ.


ಕೊಲಗೀಡಾದವರನ್ನು ಪೆರ್ಲಡ್ಕ ಪೇಟೆಯ ಉಷಾ (35) ಎಂದು ಗುರುತಿಸಲಾಗಿದೆ. ಆರೋಪಿ ಪತಿ ಅಶೋಕ್, ಡಿ. 05ರ ಭಾನುವಾರ ರಾತ್ರಿ ಕೃತ್ಯವೆಸಗಿದ್ದಾರೆ ಎನ್ನಲಾಗಿದೆ. ಕೊಲೆಯ ಬಳಿಕ ಕ್ವಾಟರ್ಸ್‌ಗೆ ಬೀಗ ಹಾಕಿ ತೆರಳಿದ್ದ ಆರೋಪಿ ಪತಿ ಅಶೋಕ್ ನನ್ನು ಇಂದು ಬೆಳಗ್ಗೆ ಕಾಸರಗೋಡು ರೈಲ್ವೆ ನಿಲ್ದಾಣದ ಪ್ರದೇಶದಿಂದ ವಶಕ್ಕೆ ಪಡೆಯಲಾಗಿದೆ. ಅಯ್ಯಪ್ಪ ವೃತಧಾರಿಯಾಗಿದ್ದ ಅಶೋಕ್ ಬೆಳಗ್ಗೆ ಭಜನಾ ಮಂದಿರಕ್ಕೆ ತಲುಪದ ಹಿನ್ನೆಲೆ, ಆತನ ಸ್ನೇಹಿತರು ಕ್ವಾಟರ್ಸ್‌ಗೆ ಹೋಗಿ ನೋಡಿದಾಗ, ಕ್ವಾಟರ್ಸ್‌ ಬೀಗ ಜಡಿದ ಸ್ಥಿತಿಯಲ್ಲಿದ್ದು, ಕಿಟಕಿ ಮೂಲಕ ಗಮನಿಸಿದಾಗ ಕೊಲೆ ಕೃತ್ಯ ಬಯಲಾಗಿದೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿದ ಪೊಲೀಸರು ಮರಣೋತ್ತರ ಪರೀಕ್ಷೆಗಾಗಿ ಕಾಸರಗೋಡು ಸರಕಾರಿ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಕೃತ್ಯಕ್ಕೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿ ಆರೋಪಿ ಪತಿ ಅಶೋಕ್‌‌ ನನ್ನು ಬೇಕಲ ಠಾಣಾ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

Also Read  ನಿರ್ಮಲಾ ಸೀತಾರಾಮನ್ ➤ ಚಿನ್ನದ ಆಮದು ಸುಂಕ ಇಳಿಕೆ ಅಸಾಧ್ಯ

 

error: Content is protected !!
Scroll to Top