ಸುಳ್ಯ: ನಿಯಂತ್ರಣ ತಪ್ಪಿ ಮೀನು ಮಾರಾಟದ ದ್ವಿಚಕ್ರ ವಾಹನ ಸ್ಕಿಡ್ ➤ ಸವಾರನಿಗೆ ಗಾಯ

(ನ್ಯೂಸ್ ಕಡಬ) newskadaba.com ಸುಳ್ಯ, ಡಿ. 03. ದ್ವಿಚಕ್ರ ವಾಹನದಲ್ಲಿ ಮೀನು ಮಾರಾಟ ಮಾಡುತ್ತಿದ್ದ ವ್ಯಕ್ತಿಯೋರ್ವರು ನಿಯಂತ್ರಣ ತಪ್ಪಿ ಬೈಕ್ ಸ್ಕಿಡ್ ಆದ ಪರಿಣಾಮ ಗಾಯಗೊಂಡ ಘಟನೆ ಗೊಂಟಡ್ಕ ತಿರುವಿನಲ್ಲಿ ಶುಕ್ರವಾರದಂದು ಸಂಜೆ ನಡೆದಿದೆ.

ಗಾಯಗೊಂಡವರನ್ನು ಬೆಟ್ಟಂಪಾಡಿ ನಿವಾಸಿ ಜಬ್ಬಾರ್ ಎಂದು ಗುರುತಿಸಲಾಗಿದೆ. ಇವರು ಇಂದು ಸಂಜೆ ದುಗ್ಗಲಡ್ಕದಿಂದ ಸುಳ್ಯಕ್ಕೆ ಬರುತ್ತಿದ್ದ ವೇಳೆ ಗೊಂಟಡ್ಕ ತಿರುವಿನಲ್ಲಿ ಈ ದುರ್ಘಟನೆ ನಡೆದಿದೆ. ಇವರು ಕಳೆದ ಒಂದು ತಿಂಗಳಿನಿಂದ ಸುಳ್ಯ ಭಾಗದಲ್ಲಿ ಮೀನು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದರು ಎನ್ನಲಾಗಿದೆ. ಘಟನೆಯಿಂದ ಜಬ್ಬಾರ್ ಅವರ ತಲೆ ಮತ್ತು ಕಾಲಿಗೆ ತೀವ್ರ ಪೆಟ್ಟಾಗಿ ರಸ್ತೆಯಲ್ಲಿ ಬಿದ್ದಿದ್ದು, ಈ ಸಂದರ್ಭ ಅದೇ ರಸ್ತೆಯ ಮೂಲಕ ವ್ಯಾನ್ ನಲ್ಲಿ ಬರುತ್ತಿದ್ದ ಹರಿಪ್ರಸಾದ್ ನಾರ್ಣಕಜೆ ಎಂಬವರು ಸವಾರರನ್ನು ತಕ್ಷಣವೇ ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.

Also Read  ಮಾ.25ಮತ್ತು 26ರಂದು ಸವಣೂರು ಮುಗೇರು ಜಾತ್ರೋತ್ಸವ

 

 

error: Content is protected !!
Scroll to Top