ಒಮಿಕ್ರಾನ್ ಭೀತಿಯ ಹಿನ್ನೆಲೆ ➤ ವಿದೇಶದಿಂದ ಮಂಗಳೂರಿಗೆ ಬಂದಿಳಿದ ನಾಲ್ವರ ಪರೀಕ್ಷೆ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ. 03. ದೇಶದಲ್ಲಿ ಒಮಿಕ್ರಾನ್ ಸೋಂಕು ಪತ್ತೆಯಾಗಿರುವ ಹಿನ್ನೆಲೆ ಕಳೆದೆರಡು ವಾರಗಳಲ್ಲಿ ಮಂಗಳೂರಿಗೆ ಬಂದಿಳಿದ ನಾಲ್ವರ ಕೋವಿಡ್ ಪರೀಕ್ಷೆ ಮಾಡಲಾಗಿದ್ದು, ಈ ವರದಿಯು ನೆಗೆಟಿವ್ ಆಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಹೇಳಿದ್ದಾರೆ.

ಇಟಲಿ, ಬೆಲ್ಜಿಯಂ, ಲಂಡನ್ ಹಾಗೂ ಪ್ಯಾರಿಸ್‌ನಿಂದ ಕಳೆದೆರಡು ವಾರದಲ್ಲಿ ಬಂದ ನಾಲ್ಕು ಮಂದಿಯ ಕೋವಿಡ್ ಪರೀಕ್ಷೆ ಮಾಡಲಾಗಿತ್ತು. ಇನ್ನು ಮಂಗಳೂರಿನಲ್ಲಿ ಒಮಿಕ್ರಾನ್ ಭೀತಿಯ ಹಿನ್ನೆಲೆ ಸರ್ವೇಕ್ಷಣೆ ಹೆಚ್ಚಿಸಲಾಗಿದೆ. ಅಂದರೆ ಕೋವಿಡ್ ಪಾಸಿಟಿವ್‌ನ 50 ಪ್ರಕರಣಗಳಲ್ಲಿ ಒಂದು ಮಾದರಿಯನ್ನು ಜೆನೋಮಿಕ್ ಸೀಕ್ವೆನ್ಸ್‌ಗಾಗಿ ಬೆಂಗಳೂರಿನ ನಿಮ್ಹಾನ್ಸ್ ಲ್ಯಾಬ್‌ಗೆ ಕಳುಹಿಸಲಾಗುತ್ತದೆ. ಈ ಮಧ್ಯೆ ದಕ್ಷಿಣ ಕನ್ನಡ ಜಿಲ್ಲಾದ್ಯಂತ ಆರ್‌ಟಿಪಿಸಿಆರ್ ಪರೀಕ್ಷೆಯನ್ನು ಕೂಡಾ ಹೆಚ್ಚಿಸಲಾಗಿದೆ ಎಂದು ಹೇಳಿದ್ದಾರೆ.

Also Read  500 ಕೋಟಿ ರೂ. ವಂಚನೆ ಪ್ರಕರಣ ➤ ಕರಣ್ ಗ್ರೂಪ್ ಬಿಲ್ಡರ್ಸ್ ಅಂಡ್ ಡೆವಲಪರ್ಸ್ ಮುಖ್ಯಸ್ಥನ ಬಂಧನ..!!

 

 

 

 

 

error: Content is protected !!
Scroll to Top