ಮಂಗಳೂರು- ಸುಬ್ರಹ್ಮಣ್ಯ ರೋಡ್ ರೈಲು ಸಂಚಾರ ಪುನರಾರಂಭ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ. 03. ಮಂಗಳೂರು ಸೆಂಟ್ರಲ್‌- ಸುಬ್ರಹ್ಮಣ್ಯ ರೋಡ್‌ ಹಾಗೂ ಮಂಗಳೂರು ಸೆಂಟ್ರಲ್‌-ಕಬಕ ಪುತ್ತೂರು- ಮಂಗಳೂರು ಸೆಂಟ್ರಲ್‌ ರೈಲು ಮರು ಆರಂಭಕ್ಕೆ ರೈಲ್ವೆ ಮಂಡಳಿಯು ಅನುಮತಿ ನೀಡಿದ್ದು ಡಿ. 09ರಿಂದ ಸಂಚರಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ.


ಈ ಕುರಿತು ವೇಳಾಪಟ್ಟಿ ಬಿಡುಗಡೆಯಾಗಿದ್ದು, ಇದರ ಪ್ರಕಾರ ನಂ. 06489 ರೈಲು ಬೆಳಗ್ಗೆ 10ಕ್ಕೆ ಮಂಗಳೂರು ಸೆಂಟ್ರಲ್‌ನಿಂದ ಹೊರಟು, 10.50ಕ್ಕೆ ಬಂಟ್ವಾಳ, 11.04ಕ್ಕೆ ನೇರಳಕಟ್ಟೆ, 11.18ಕ್ಕೆ ಕಬಕ ಪುತ್ತೂರು, 11.31ಕ್ಕೆ ನರಿಮೊಗರು, 11.40ಕ್ಕೆ ಕಾಣಿಯೂರು, 11.50 ಕ್ಕೆ ಎಡಮಂಗಲ, 11.56ಕ್ಕೆ ಕೋಡಿಂಬಾಳ, 12.01ಕ್ಕೆ ಬಜಕೆರೆ, ಹಾಗೂ 12.30ಕ್ಕೆ ಸುಬ್ರಹ್ಮಣ್ಯಕ್ಕೆ ತಲುಪಲಿದೆ.

ಮತ್ತೆ ನಂ. 06488 ಸುಬ್ರಹ್ಮಣ್ಯ ರೋಡ್‌-ಮಂಗಳೂರು ಸೆಂಟ್ರಲ್‌ ರೈಲು 1.30ಕ್ಕೆ ಸುಬ್ರಹ್ಮಣ್ಯ ರೋಡ್‌ನಿಂದ ಹೊರಟು, 1.37ಕ್ಕೆ ಬಜಕೆರೆ,1.41ಕ್ಕೆ ಕೋಡಿಂಬಾಳ, 1.49ಕ್ಕೆ ಎಡಮಂಗಲ, 1.57ಕ್ಕೆ ಕಾಣಿಯೂರು, 2.06ಕ್ಕೆ ನರಿಮೊಗರು, 2.19ಕ್ಕೆ ಕಬಕ ಪುತ್ತೂರು, 2.32ಕ್ಕೆ ನೇರಳಕಟ್ಟೆ, 2.49ಕ್ಕೆ ಬಂಟ್ವಾಳ, 3.35ಕ್ಕೆ ಪಡೀಲ್‌ ಹಾಗೂ 4.10ಕ್ಕೆ ಮಂಗಳೂರು ಸೆಂಟ್ರಲ್‌ಗೆ ತಲುಪಲಿದೆ.

Also Read  ಪಂಜ: ಅರಣ್ಯ ಇಲಾಖೆಯ ಪ್ರೊಬೆಷನರಿ ವಲಯ ಅರಣ್ಯಾಧಿಕಾರಿಯಾಗಿ ಪ್ರಮೋದ್ ಎಣ್ಣೆಮಜಲು ಕರ್ತವ್ಯಕ್ಕೆ ಹಾಜರು

 

ಮಂಗಳೂರು ಸೆಂಟ್ರಲ್‌-ಕಬಕ ಪುತ್ತೂರು

ಮಂಗಳೂರು ಸೆಂಟ್ರಲ್‌-ಕಬಕ ಪುತ್ತೂರು-ಮಂಗಳೂರು ಸೆಂಟ್ರಲ್‌ ನಡುವೆ ಬೆಳಗ್ಗೆ ಹಾಗೂ ಸಂಜೆ ರೈಲು ಸಂಚಾರ ನಡೆಸಲಿದೆ.

ನಂ. 06487 ರೈಲು ಸಂಜೆ 6 ಗಂಟೆಗೆ ಮಂಗಳೂರಿನಿಂದ ಹೊರಟು 6.14ಕ್ಕೆ ಮಂಗಳೂರು ಜಂಕ್ಷನ್‌, 6.30ಕ್ಕೆ ಪಡೀಲ್‌, 6.44ಕ್ಕೆ ಬಂಟ್ವಾಳ ಹಾಗೂ 7.25ಕ್ಕೆ ಕಬಕ-ಪುತ್ತೂರು ತಲುಪಲಿದೆ. ಬಳಿಕ ಪುತ್ತೂರಿನಿಂದ ನಂ. 06486 ರೈಲು ರಾತ್ರಿ 8.25ಕ್ಕೆ ಹೊರಟು 8.54ಕ್ಕೆ ಬಂಟ್ವಾಳ, 9.39ಕ್ಕೆ ಮಂಗಳೂರು ಜಂಕ್ಷನ್‌ ಹಾಗೂ 10.05ಕ್ಕೆ ಮಂಗಳೂರು ಸೆಂಟ್ರಲ್‌ ತಲುಪಲಿದೆ.

ನಂ. 06485 ಮಂಗಳೂರು ಸೆಂಟ್ರಲ್‌-ಕಬಕ-ಪುತ್ತೂರು ರೈಲು ಬೆಳಗ್ಗೆ 5.45ಕ್ಕೆ ಮಂಗಳೂರು ಸೆಂಟ್ರಲ್‌ನಿಂದ ಹೊರಟು 5.57ಕ್ಕೆ ಮಂಗಳೂರು ಜಂಕ್ಷನ್‌, 6.15ಕ್ಕೆ ಪಡೀಲ್‌, 6.29ಕ್ಕೆ ಬಂಟ್ವಾಳ, 6.43ಕ್ಕೆ ನೇರಳಕಟ್ಟೆ ಹಾಗೂ 7.15ಕ್ಕೆ ಕಬಕ ಪುತ್ತೂರು ತಲುಪಲಿದೆ.

Also Read  ಗ್ರಾ.ಪಂ. ಪಿಡಿಓ ನೇಣುಬಿಗಿದು ಆತ್ಮಹತ್ಯೆ ► ಪಂಚಾಯತ್ ನ ಶೌಚಾಲಯದಲ್ಲಿ ಕೃತ್ಯ

ನಂ. 06484 ರೈಲು 7.55ಕ್ಕೆ ಪುತ್ತೂರಿನಿಂದ ಹೊರಟು 8.09ಕ್ಕೆ ನೇರಳಕಟ್ಟೆ, 8.27ಕ್ಕೆ ಬಂಟ್ವಾಳ, 8.55ಕ್ಕೆ ಪಡೀಲ್‌, 8.59ಕ್ಕೆ ಮಂಗಳೂರು ಜಂಕ್ಷನ್‌ ಹಾಗೂ 9.25ಕ್ಕೆ ಮಂಗಳೂರು ಸೆಂಟ್ರಲ್‌ ತಲುಪಲಿದೆ ಎಂದು ಪ್ರಕಟಣೆ ತಿಳಿಸಿದೆ.

 

error: Content is protected !!
Scroll to Top