ಒಮಿಕ್ರಾನ್ ಹೆಸರಿನಲ್ಲೂ ಲಂಚ ಹೊಡೆಯುವುದನ್ನು ಸರಕಾರ ಕೈಬಿಡಬೇಕು ➤ ಕೆಪಿಸಿಸಿ ಅಧ್ಯಕ್ಷ ಡಿಕೆಶಿ

(ನ್ಯೂಸ್ ಕಡಬ) newskadaba.com ಚಿಕ್ಕಮಗಳೂರು, ಡಿ. 03. ರೂಪಾಂತರಿ ವೈರಸ್ ಒಮಿಕ್ರಾನ್ ವಿಚಾರದಲ್ಲೂ ಕೂಡಾ ಲಂಚ ಹೊಡೆಯುವುದನ್ನು ಸರಕಾರ ನಿಲ್ಕಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿಕೆಯೊಂದನ್ನು ನೀಡಿದ್ದಾರೆ.


ಮಾಧ್ಯಮದೊಂದಿಗೆ ಮಾತನಾಡಿದ ಅವರು, ವೈರಸ್ ವಿಚಾರವಾಗಿ ಕೆಲವು ಮಾಹಿತಿ ಬರುತ್ತಾ ಇದ್ದು, ನಿಖರವಾಗಿ ಯಾವುದೇ ಪ್ರಕರಣಗಳು ಹೊರಬಂದಿಲ್ಲ. ಅಲ್ಲಲ್ಲಿ ಒಂದೊಂದು ಪ್ರಕರಣಗಳ ಬಗ್ಗೆ ವರದಿ ಆಗಿದೆ. ಭಯದ ವಾತಾವರಣ ನಿರ್ಮಾಣವಾಗಬಾರದು. ಈ ಕುರಿತು ಸರಕಾರ ಹಾಗೂ ಆರೋಗ್ಯ ಇಲಾಖೆ ಮುಂಜಾಗೃತಾ ಕ್ರಮಗಳನ್ನು ವಹಿಸಬೇಕು ಎಂದರು. ಈಗಾಗಲೇ ಕೊರೋನಾ ಲಾಕ್ ಡೌನ್ ನಿಂದಾಗಿ ಇಡೀ ದೇಶದ ಜನ ನರಳುತ್ತಿದ್ದು, ಸುಮ್ಮನೆ ಭಯ ಹುಟ್ಟಿಸಿ, ಎಲ್ಲಾ ವ್ಯವಹಾರಗಳನ್ನು ನಿಲ್ಲಿಸುವಂತೆ ಆಗಬಾರದು ಎಂದು ಹೇಳಿದ್ದಾರೆ.

Also Read  ಜ.21ರಂದು ಪತ್ರಕರ್ತರ 35 ನೇ ರಾಜ್ಯ ಸಮ್ಮೇಳನದ ಕೈಪಿಡಿ ಬಿಡುಗಡೆ

 

 

 

 

error: Content is protected !!
Scroll to Top