ಮಂಗಳೂರು: ಆಯುಧಗಳನ್ನು ಝಳಪಿಸುತ್ತಾ ಗೋವುಗಳ ಕಳ್ಳತನ ➤ ಆರೋಪಿಗಳ ಪತ್ತೆಹಚ್ಚಿ ಸೂಕ್ತ ಕ್ರಮಕ್ಕೆ ವಿಹಿಂಪ ಆಗ್ರಹ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ. 03. ಗೋಕಳ್ಳರ ಅಟ್ಟಹಾಸ ಮುಂದುವರಿಯುತ್ತಲೇ ಇದ್ದು, ಶುಕ್ರವಾರದಂದು ನಸುಕಿನ ಜಾವ ನಾಲ್ಕು ಗಂಟೆ ವೇಳೆಗೆ ಗೋಲ್ಡ್ ಫಿಂಚ್ ಮುಂಭಾಗದಲ್ಲಿ ಆಯುಧಗಳನ್ನು ಝಳಪಿಸುತ್ತಾ 3 ದನಗಳನ್ನು ಕದ್ದೊಯ್ದ ಘಟನೆ ಬಂಗ್ರಕೂಳೂರು ಎಂಬಲ್ಲಿ ನಡೆದಿದೆ.

ಕಪ್ಪು ಬಣ್ಣದ ಸ್ಕಾರ್ಪಿಯೋ ಒಂದರಲ್ಲಿ ಬಂದ ಗೋಕಳ್ಳರು ಆಯುಧಗಳನ್ನು ಝಲಪಿಸುತ್ತಾ ಗೋವುಗಳನ್ನು ಕದ್ದೊಯ್ದಿದ್ದಾರೆ ಎನ್ನಲಾಗಿದೆ. ಈ ಘಟನೆಯನ್ನು ವಿಹಿಂಪ ಬಜರಂಗದಳ ಕಾವೂರು ಪ್ರಖಂಡವು ತೀವ್ರವಾಗಿ ಖಂಡಿಸಿದ್ದು, ಘಟನೆಯ ಹಿಂದೆ ದೊಡ್ಡ ಜಾಲವೇ ಕಾರ್ಯಾಚರಿಸುತ್ತಿರುವ ಶಂಕೆ ಹಿನ್ನೆಲೆ ಪೊಲೀಸ್ ಇಲಾಖೆ ತನಿಕೆ ನಡೆಸಿ ಅಪರಾಧಿಗಳನ್ನು ಬಂಧಿಸಿ ಶಿಕ್ಷಿಸಬೇಕು ಎಂದು ಆಗ್ರಹಿಸಿದ್ದಾರೆ.

Also Read  ಮದುವೆಯಾದರೂ ಪ್ರೇಯಸಿಯ ಹಿಂದೆ ಸುತ್ತುತ್ತಿದ್ದ ಎಸ್.ಐ ನೇಣಿಗೆ ಶರಣು

 

 

error: Content is protected !!
Scroll to Top