“ಯೋಗ್ಯತೆ ಇಲ್ಲ ಅಂದ್ಮೇಲೆ ಸಮವಸ್ತ್ರ ಕಳಚಿಟ್ಟು ಸಾಯಲಿ..!” ➤ ಪೊಲೀಸರ ವಿರುದ್ದ ಕಿಡಿಕಾರಿದ ಸಚಿವ ಆರಗ ಜ್ಞಾನೇಂದ್ರ

(ನ್ಯೂಸ್ ಕಡಬ) newskadaba.com ಶಿವಮೊಗ್ಗ, ಡಿ. 03. ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಗೋಹತ್ಯೆ ಕುರಿತು ಬೇಸರ ವ್ಯಕ್ತಪಡಿಸಿದ ಗೃಹ ಸಚಿವ ಅರಗ ಜ್ಞಾನೇಂದ್ರ ಅವರು, ಪೊಲೀಸರು ಗೋಕಳ್ಳರ ಬಗ್ಗೆ ಸಂಪೂರ್ಣ ಮಾಹಿತಿ ಇದ್ದರೂ ಕೂಡಾ ಎಂಜಲು ಕಾಸಿನ ಆಸೆಗೆ ಸುಮ್ಮನೇ ಕುಳಿತಿದ್ದಾರೆ ಎಂದು ಚಿಕ್ಕಮಗಳೂರು ಪೊಲೀಸರ ವಿರುದ್ಧ ಶಿವಮೊಗ್ಗದಲ್ಲಿ ಕಿಡಿಕಾರಿದ್ದಾರೆ.

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನಲ್ಲಿರುವ ತಮ್ಮ ನಿವಾಸದ ಕಚೇರಿಯಿಂದಲೇ ಪಕ್ಷದ ಕಾರ್ಯಕರ್ತರ ಸಮ್ಮುಖದಲ್ಲೇ ಚಿಕ್ಕ ಮಗಳೂರು ಜಿಲ್ಲೆಯ ಪೊಲೀಸ್​ ಅಧಿಕಾರಿಗೆ ಕರೆ ಮಾಡಿದ ಅವರು, ಪೊಲೀಸ್​ ಇಲಾಖೆಯಲ್ಲಿ ಇರಲು ಯೋಗ್ಯತೆ ಇಲ್ಲ ಅಂದ್ಮೇಲೆ, ಸಮವಸ್ತ್ರ ಕಳಚಿಟ್ಟು ಸಾಯಲಿ. ಇಲ್ಲವೇ ಮನೆ ಕಡೆಗೆ ಹೋಗಲಿ. ಸರ್ಕಾರದಿಂದ ಪೊಲೀಸರಿಗೆ ಕೈ ತುಂಬಾ ಸಂಬಳ ನೀಡುತ್ತಿದ್ದೇವೆ. ಆದರೂ ಪೊಲೀಸರು ಎಂಜಲು ಕಾಸಿಗೆ ಕೈಯೊಡ್ಡುತ್ತಿದ್ದಾರೆ. ನಿಮಗ್ಯಾರಿಗೂ ಆತ್ಮಗೌರವ ಅನ್ನೋದೇ ಇಲ್ಲವೇ..? ಎಂದು ಪ್ರಶ್ನೆ ಮಾಡಿದ್ದಾರೆ. ಪ್ರತಿನಿತ್ಯ ಅಕ್ರಮ ಗೋವು ಸಾಗಾಟ ನಡೆಯುತ್ತಿರುವ ಕುರಿತು ಯಾರೆಂದು ಪೊಲೀಸರಿಗೆ ತಿಳಿದಿದೆ. ಆದರೆ ಲಂಚವನ್ನು ತಿಂದು ನಾಯಿಯಂತೆ ಬಿದ್ದಿದ್ದಾರೆ. ಎಲ್ಲಾ ಪೊಲೀಸರು ಕೆಟ್ಟು ಹಾಳಾಗಿ ಹೋಗಿದ್ದಾರೆ ಗೃಹ ಸಚಿವನ ಸ್ಥಾನದಲ್ಲಿ ನಾನು ಇರಬೇಕೋ ಬೇಡವೋ ಎಂದು ಕೇಳಿದ್ದಾರೆ ಎನ್ನಲಾಗಿದೆ.

Also Read  ಕಾಲೇಜು ಶಿಕ್ಷಣ ಮುಗಿಸಿದ ವಿದ್ಯಾರ್ಥಿನಿಯರಿಗೆ ಭರ್ಜರಿ ಆಫರ್ ಘೋಷಣೆ ➤ ಪಿಯುಸಿ ಆದವರಿಗೆ 15 ಸಾವಿರ ಹಾಗೂ ಡಿಗ್ರಿ ಮುಗಿಸಿದವರಿಗೆ 25ಸಾವಿರದ ವಿಶೇಷ ಪ್ಯಾಕೇಜ್

 

error: Content is protected !!
Scroll to Top