ಬ್ಯಾಂಕ್ ಗಳ ಖಾಸಗೀಕರಣ ವಿರೋಧಿಸಿ ಡಿ. 16 & 17ರಂದು ದೇಶವ್ಯಾಪಿ ಮುಷ್ಕರ ➤ ಯುನೈಟೆಡ್ ಫೋರಂ‌ ಆಫ್ ಬ್ಯಾಂಕ್ ಯೂನಿಯನ್ಸ್ ಕರೆ

(ನ್ಯೂಸ್ ಕಡಬ) newskadaba.com ನವದೆಹಲಿ, ಡಿ. 02. ಸಾರ್ವಜನಿಕ ವಲಯದಲ್ಲಿನ ಬ್ಯಾಂಕ್‌ಗಳನ್ನು ಖಾಸಗೀಕರಣಗೊಳಿಸುವ ಸರ್ಕಾರದ ಯೋಜನೆಯನ್ನು ವಿರೋಧಿಸಿ ಒಂಬತ್ತು ಒಕ್ಕೂಟಗಳ ಸಂಸ್ಥೆಯಾದ ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ ಡಿಸೆಂಬರ್ 16 ಮತ್ತು 17ರಂದು ಎರಡು ದಿನಗಳ ಕಾಲ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿದೆ.

ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಕೇಂದ್ರ ಸರ್ಕಾರವು ಬ್ಯಾಂಕಿಂಗ್ ಕಾನೂನುಗಳ ಮಸೂದೆಯನ್ನು ಪರಿಚಯಿಸುತ್ತದೆ. ಸಾರ್ವಜನಿಕ ವಲಯದ ಎರಡು ಬ್ಯಾಂಕ್‌ಗಳ ಖಾಸಗೀಕರಣ, ಬ್ಯಾಂಕಿಂಗ್ ಕಂಪೆನಿಗಳ ಕಾಯ್ದೆಗಳಲ್ಲಿ ತಿದ್ದುಪಡಿ, 1970, 1980 ಮತ್ತು ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ 1949ರಲ್ಲಿ ತಿದ್ದುಪಡಿಗಳನ್ನು ಮಾಡುವುದು ಈ ಮಸೂದೆಯ ಉದ್ದೇಶವಾಗಿದೆ.

Also Read  ಕೊಲೆಯಾದ 18 ವರ್ಷಗಳ ನಂತರ ಪೋಷಕರಿಂದ ಬಾಲಕಿಯ ಅಸ್ಥಿಪಂಜರ ಅಂತ್ಯಕ್ರಿಯೆ..!

ಯುನೈಟೆಡ್ ಫೋರಮ್ ಆಫ್ ಬ್ಯಾಂಕ್ ಯೂನಿಯನ್ಸ್ ಸಂಚಾಲಕ ಮಹೇಶ್ ಮಿಶ್ರಾ ಅವರು ಮಾತನಾಡಿ, ಸರ್ಕಾರವು ಪ್ರಸಕ್ತ ಸಂಸತ್ ಅಧಿವೇಶನದಲ್ಲಿ ಬ್ಯಾಂಕಿಂಗ್ ಸುಧಾರಣಾ ಮಸೂದೆಯನ್ನು ಅಂಗೀಕರಿಸಲು ಬಯಸುತ್ತದೆ, ಇದು ಖಾಸಗೀಕರಣಕ್ಕೆ ದಾರಿ ಮಾಡಿಕೊಡುತ್ತದೆ. ಇಂದಿನಿಂದ (ಡಿಸೆಂಬರ್ 3) ಪ್ರಾರಂಭವಾದ ಚಳವಳಿಯ ಭಾಗವಾಗಿ ಯುನೈಟೆಡ್ ಫೋರಂ ಈ ಮಸೂದೆಯನ್ನು ವಿರೋಧಿಸಿ ಧರಣಿ ನಡೆಸಲಿದೆ ಎಂದು ಅವರ ತಿಳಿಸಿದ್ದಾರೆ.

 

 

 

 

error: Content is protected !!
Scroll to Top