ವಿಟ್ಲ: ಕೇರಳ ನೋಂದಣಿಯ ಕಾರಿನಲ್ಲಿ ಅನುಮಾನಾಸ್ಪದ ತಿರುಗಾಟ ➤ ಮೂವರು ವಶಕ್ಕೆ..!

(ನ್ಯೂಸ್ ಕಡಬ) newskadaba.com ವಿಟ್ಲ, ಡಿ. 03. ಕೇರಳ ಮೂಲದ ಕಾರಿನಲ್ಲಿ ಬಂದು ಸಂಶಯಾಸ್ಪದವಾಗಿ ತಿರುಗಾಡುತ್ತಿದ್ದ ಮೂವರನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ವಿಟ್ಲ ಠಾಣಾ ವ್ಯಾಪ್ತಿಯ ಕೊಳ್ನಾಡು ಗ್ರಾಮದ ಸೆರ್ಕಳ ಕಲ್ಲಮಜಲು ಎಂಬಲ್ಲಿ ನಡೆದಿದೆ.


ಬುಧವಾರದಂದು ರಾತ್ರಿ 12 ಗಂಟೆಯ ವೇಳೆಗೆ ಕೇರಳ ನೋಂದಣಿಯ ಮಾರುತಿ ರಿಟ್ಝ್ ಕಾರಿನಲ್ಲಿ ಬಂದ ಮೂವರು ಮನೆಯೊಂದರ ಬಳಿ ಸಂಶಯಾಸ್ಪದವಾಗಿ ತಿರುಗಾಡುತ್ತಿದ್ದುದನ್ನು ಕಂಡು, ಸ್ಥಳೀಯರು ವಿಚಾರಿಸಿದಾಗ ಕೇರಳದ ವಡಗರ ಎಂದು ಅಸ್ಪಷ್ಟ ಮಾಹಿತಿ ನೀಡಿದ ಕಾರಣ ಪೊಲೀಸರಿಗೆ ದೂರು ನೀಡಿದ್ದಾರೆ‌. ಸ್ಥಳಕ್ಕಾಗಮಿಸಿದ ಪೊಲೀಸರು ಮೂವರನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.

Also Read  ಸುಳ್ಶ ಶಾಸಕರನ್ನು ಅಭಿನಂದಿಸಿದ ಕುದಲೂರು ಮುಸ್ಲಿಮ್ ಮುಖಂಡರು

error: Content is protected !!
Scroll to Top