ಆಟೋ ಚಲಾಯಿಸುತ್ತಿರುವಾಗಲೇ ಚಾಲಕನಿಗೆ ಹಾರ್ಟ್ ಅಟ್ಯಾಕ್..! ➤ ಚಾಲಕ ಮೃತ್ಯು- ನೇತ್ರಾವತಿ ಸೇತುವೆ ಮಧ್ಯೆ ನಡೆದ ಘಟನೆ

(ನ್ಯೂಸ್ ಕಡಬ) newskadaba.com ಉಳ್ಳಾಲ, ಡಿ. 03. ಮಂಗಳೂರು ನಗರ ಭಾಗದಿಂದ ಕಲ್ಲಾಪಿನಲ್ಲಿರುವ ಗ್ಲೋಬಲ್ ಮಾರ್ಕೆಟ್ ಗೆ ತೆರಳುತ್ತಿದ್ದ ಆಟೋ ರಿಕ್ಷಾ ಚಾಲಕನೋರ್ವ, ಆಟೋ ಚಲಾಯಿಸುತ್ತಿರುವಾಗಲೇ ಹೃದಯಾಘಾತಕ್ಕೆ ಬಲಿಯಾದ ಘಟನೆ ನೇತ್ರಾವತಿ ಸೇತುವೆಯಲ್ಲಿ ನಡೆದಿದೆ.

ಮೃತರನ್ನು ಮೊಹಮ್ಮದ್ ಹನೀಫ್ ಎಂದು ಗುರುತಿಸಲಾಗಿದೆ. ಇವರು ಮಂಗಳೂರು ನಗರದಿಂದ ಕಲ್ಲಾಪು ಗ್ಲೋಬಲ್ ಮಾರುಕಟ್ಟೆಗೆ ತರಕಾರಿ ಖರೀದಿಸಲೆಂದು ಇಂದು ಮುಂಜಾನೆ ಓರ್ವ ವ್ಯಾಪಾರಿಯನ್ನು ಕರೆದುಕೊಂಡು ಹೋಗುತ್ತಿದ್ದ ವೇಳೆ ಹೃದಯಾಘಾತ ಸಂಭವಿಸಿದೆ ಎನ್ನಲಾಗಿದೆ. ಮಂಗಳೂರಿನಿಂದ ಜಪ್ಪಿನ ಮೊಗರು ಹೆದ್ದಾರಿಯಲ್ಲೇ ಚಾಲಕನಿಗೆ ಕಣ್ಣು ಮಂಜಾಗಿದ್ದು, ಪರಿಣಾಮ ರಸ್ತೆ ಮಧ್ಯದ ವಿಭಜಕಕ್ಕೆ ಡಿಕ್ಕಿ ಹೊಡೆದಿದ್ದಾರೆ. ಈ ವೇಳೆ ಜಮಾಯಿಸಿದ ಸಾರ್ವಜನಿಕರು ಚಾಲಕನಿಗೆ ಶುಶ್ರೂಷೆ ನೀಡಿದ್ದು, ಚಾಲಕ ಅಲ್ಲಿಂದ ಸ್ವಲ್ಪ ಮುಂದಕ್ಕೆ ಚಲಿಸಿದ ಕೂಡಲೇ ನೇತ್ರಾವತಿ ಸೇತುವೆಯ ಮಧ್ಯೆ ಆಟೋ ಸ್ಥಗಿತಗೊಂಡು ಚಾಲಕ ಹೃದಯಾಘಾತಕ್ಕೆ ತುತ್ತಾಗಿ ಕುಸಿದು ಬಿದ್ದಿದ್ದಾರೆ ಎನ್ನಲಾಗಿದೆ.

Also Read  ಏಣಿತ್ತಡ್ಕ : ಅಂಗನವಾಡಿ ಕೇಂದ್ರ ➤ 73ನೇ ವರ್ಷದ ಸ್ವಾತಂತ್ರ್ಯೋತ್ಸವ ದಿನಾಚರಣೆ

 

error: Content is protected !!
Scroll to Top