ಕರಾವಳಿಯಲ್ಲಿ ಮತ್ತೆ ವಿದ್ಯಾರ್ಥಿಗಳ ನಡುವೆ ಹೊಡೆದಾಟ ➤ ಜಗಳ ಬಿಡಿಸಲು ಬಂದ ಪೊಲೀಸರ ಮೇಲೂ ಹಲ್ಲೆ..!

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ. 03. ಕರಾವಳಿಯಲ್ಲಿ ಮತ್ತೆ ವಿದ್ಯಾರ್ಥಿಗಳ ನಡುವೆ ಹೊಡೆದಾಟ ಮುಂದುವರಿದಿದ್ದು, ಜಗಳ ಬಿಡಿಸಲು ಹೋದ ಐವರು ಪೊಲೀಸರಿಗೂ ಕಲ್ಲು ಹಾಗೂ ಇಂಟರ್ ಲಾಕ್ ಎಸೆದ ಘಟನೆ ನಡೆದಿದೆ.

ಯೇನಪೋಯ ಮೆಡಿಕಲ್ ಕಾಲೇಜಿನಲ್ಲಿ ಬಿಎಸ್ಸಿ ಹಾಸ್ಪಿಟಾಲಿಟಿ ಓದುತ್ತಿರುವ ಕೇರಳ ಮೂಲದ ಆದರ್ಶ ಪ್ರೇಮಕುಮಾರ್ ಎಂಬಾತ ಬಾವುಟ ಗುಡ್ಡೆಯಲ್ಲಿರುವ ಲೈಟ್ ಹೌಸ್ ಹಿಲ್ ಅಪಾರ್ಟ್ಮೆಂಟ್ ಬಳಿ ಸ್ನೇಹಿತ ಸಿನಾನ್ ಎಂಬಾತನ ಜೊತೆ ಮಾತನಾಡುತ್ತಿದ್ದ ವೇಳೆ ಬಂದ ಎಂಟು ಜನರ ತಂಡವು ಆದರ್ಶ್ ಮೇಲೆ ಹಲ್ಲೆ ನಡೆಸಿದೆ. ತೀವ್ರ ಗಾಯಗೊಂಡ ಆದರ್ಶ್ ನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈ ಕುರಿತು ಆದರ್ಶ್ ನೀಡಿರುವ ದೂರಿನಂತೆ ಪ್ರಕರಣ ದಾಖಲಾಗಿದೆ. ಈ ಸಂದರ್ಭದಲ್ಲಿ ಆದರ್ಶ್ ಸ್ನೇಹಿತರಾದ ಶ್ರವಣ್ ಮತ್ತು ಶೆನಿನ್ ಜಗಳ ಬಿಡಿಸಲೆಂದು ಬಂದಿದ್ದ, ಅವರಿಗೂ ಹಲ್ಲೆ ನಡೆಸಿದ್ದಾರೆ. ಅಲ್ಲದೇ, ಇವರ ಗಲಾಟೆಯಲ್ಲಿ ಎದುರಾಳಿ ತಂಡದ ಮಹಮ್ಮದ್ ಶರೀಫ್ ಎಂಬವನ ಮೇಲೂ ಹಲ್ಲೆಯಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾನೆ. ಈ ಘಟನೆಗೆ ಸಂಬಂಧಿಸಿ ಎರಡೂ ತಂಡಕ್ಕೆ ಸೇರಿದ ಆದಿತ್ಯ, ಕೆನ್ ಜಾನ್ಸನ್, ಅಬ್ದುಲ್ ಶಾಹಿದ್, ಮೊಹಮ್ಮದ್ ಹಾಗೂ ವಿಮಲ್ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.

Also Read  ಚುನಾವಣೆಯ ಬಳಿಕ ಕೆ.ಎಸ್.ಮಸೂದ್ ರನ್ನು ಭೇಟಿಯಾದ ಶಾಸಕ ಯು.ಟಿ ಖಾದರ್

error: Content is protected !!
Scroll to Top