ಶಾಲೆಗೆ ತೆರಳುತ್ತಿದ್ದ ಬಾಲಕಿಯ ಕೈ ಹಿಡಿದೆಳೆದು ಕಿರುಕುಳಕ್ಕೆ ಯತ್ನ ಪ್ರಕರಣ ➤ ಆರೋಪಿ ಅಂದರ್- ಪೋಕ್ಸೋ ಪ್ರಕರಣ ದಾಖಲು

(ನ್ಯೂಸ್ ಕಡಬ) newskadaba.com ಉಳ್ಳಾಲ, ಡಿ. 02. ತಲಪಾಡಿಯಲ್ಲಿ ಶಾಲೆಗೆ ತೆರಳುತ್ತಿದ್ದ ಅಪ್ರಾಪ್ತ ಬಾಲಕಿಯ ಕೈಹಿಡಿದೆಳೆದು ಕಿರುಕುಳ ನೀಡಿದ್ದ ವಿಕೃತ ಕಾಮಿಯನ್ನು ಪೊಲೀಸರು ಬಂಧಿಸಿದ ಘಟನೆ ವರದಿಯಾಗಿದೆ.

 

ಬಂಧಿತ ಆರೋಪಿಯನ್ನು ಕೆ.ಸಿ.ರೋಡ್ ಮುಳ್ಳುಗುಡ್ಡೆ ನಿವಾಸಿ ರಾಶಿಕ್ (22) ಎಂದು ಗುರುತಿಸಲಾಗಿದೆ. ಬುಧವಾರದಂದು ಬೆಳಗ್ಗೆ ತಲಪಾಡಿಯಿಂದ 14 ವರ್ಷದ ಬಾಲಕಿಯೋರ್ವಳು ಒಳರಸ್ತೆಯಾಗಿ ಕಾಲ್ನಡಿಗೆಯ ಮೂಲಕ ಶಾಲೆಗೆ ತೆರಳುತ್ತಿದ್ದ ವೇಳೆ ಸ್ಕೂಟರಿನಲ್ಲಿ ಬಂದ ಅಪರಿಚಿತನೋರ್ವ ಬಾಲಕಿಯ ಕೈ ಎಳೆದು ಅತ್ಯಾಚಾರಕ್ಕೆ ಯತ್ನಿಸಿರುವುದಾಗಿ ಬಾಲಕಿಯ ಹೆತ್ತವರು ಉಳ್ಳಾಲ ಪೊಲೀಸರಿಗೆ ದೂರು ನೀಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ ಉಳ್ಳಾಲ ಮತ್ತು ಸಿಸಿಬಿ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಇದೀಗ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿ ಸ್ಕೂಟರಲ್ಲಿ ಬಂದಿರುವ ಮಾಹಿತಿ ಸಿಸಿಟಿವಿಯಲ್ಲಿ ದಾಖಲಾಗಿತ್ತು. ‌ಇದರ ಆಧಾರದ ಮೂಲಕ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಆರೋಪಿ ವಿರುದ್ಧ ಪೋಕ್ಸೊ ಪ್ರಕರಣ ದಾಖಲಾಗಿದೆ.

Also Read  ಅವಿನಾಶ್ ಬಸ್ ಮಾಲಕ ನಾರಾಯಣ ರೈ ಆತ್ಮಹತ್ಯೆ..!

 

error: Content is protected !!
Scroll to Top