ಉಪ್ಪಿನಂಗಡಿ: ಮನೆಯ ಹಿಂಬಾಗಿಲು ಮುರಿದು ಒಳನುಗ್ಗಿ ಚಿನ್ನಾಭರಣ ದೋಚಿದ ಕಳ್ಳರು

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಡಿ. 02. ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಯ ಹಿಂಬಾಗಿಲನ್ನು ಮುರಿದು ಒಳನುಗ್ಗಿದ ಕಳ್ಳರು ಮನೆಯಲ್ಲಿದ್ದ ಹಣ ಮತ್ತು ಚಿನ್ನಾಭರಣಗಳನ್ನು ಕದ್ದೊಯ್ದ ಘಟನೆ ತಾಲೂಕಿನ ಕಣಿಯೂರು ಗ್ರಾಮದ ಉರುವಾಲು ಪದವು ಎಂಬಲ್ಲಿ ಬುಧವಾರದಂದು ನಡೆದಿದೆ.

ಉರುವಾಲು ಪದವು ನಿವಾಸಿ ಹಮೀದ್ ಎಂಬವರ ಮನೆಯಲ್ಲಿ ಕಳ್ಳತನ ನಡೆದಿದ್ದು, ಅವರು ತಮ್ಮ ಪತ್ನಿ ಮಕ್ಕಳೊಂದಿಗೆ ನೆಲ್ಯಾಡಿಯಲ್ಲಿರುವ ತನ್ನ ಮಗಳ ಮನೆಗೆ ಹೋಗಿದ್ದ ವೇಳೆ ಈ ಕೃತ್ಯ ನಡೆದಿದೆ ಎನ್ನಲಾಗಿದೆ. ಬಾಗಿಲು ಮುರಿದು ಒಳ ನುಗ್ಗಿದ ಕಳ್ಳರು ಮನೆಯೊಳಗಿದ್ದ ಕಪಾಟಿನ ಬೀಗ ಮುರಿದು ನೆಕ್ಲೇಸ್ ಹಾಗೂ ಎರಡು ಉಂಗುರ ಸೇರಿದಂತೆ ಆರು ಪವನ್ ತೂಕದ ಚಿನ್ನಾಭರಣವನ್ನು ಹಾಗೂ ಸ್ವಲ್ಪ ನಗದು ಹಣವನ್ನು ಕದ್ದೊಯಿದ್ದಾರೆ. ಈ ಕುರಿತು ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ಕಡಬ: ಆಸ್ತಿ ವಿಚಾರಕ್ಕೆ ಕುಟುಂಬ ಕಲಹ ➤ ಅಣ್ಣನಿಗೆ ತಲವಾರು ಬೀಸಿದ ತಮ್ಮ

 

error: Content is protected !!
Scroll to Top