ನಾಪತ್ತೆಯಾದ ವ್ಯಕ್ತಿಯನ್ನು ಹುಡುಕಲು ಹೋದಾಗ ಪತ್ತೆಯಾಯಿತು ಲಕ್ಷಾಂತರ ರೂ. ಬೆಲೆಬಾಳುವ ಮರ..!

(ನ್ಯೂಸ್ ಕಡಬ) newskadaba.com ಕೊಟ್ಟಿಗೆಹಾರ, ಡಿ. 02. ನಾಪತ್ತೆಯಾದ ವ್ಯಕ್ತಿಯನ್ನು ಹುಡುಕಲು ಹೋದ ಸಂದರ್ಭ ಅಕ್ರಮವಾಗಿ ಸಂಗ್ರಹಿಸಿಡಲಾಗಿದ್ದ ಲಕ್ಷಾಂತರ ರೂ. ಬೆಲೆಬಾಳುವ ಮರ ಪತ್ತೆಯಾದ ಘಟನೆ ಬಿದಿರುತಳ ಎಂಬಲ್ಲಿ ನಡೆದಿದೆ.


ಬಾಳೂರು ಗ್ರಾಮದ ನಾಗೇಶ್ ಆಚಾರ್ ಎಂಬವರು ಬಿದಿರುತಳ ಗ್ರಾಮದಿಂದ ಕೆಲದಿನಗಳ ಹಿಂದೆ ನಾಪತ್ತೆಯಾಗಿದ್ದು, ಬಿದಿರುತಳಕ್ಕೆ ಅರಣ್ಯಾಧಿಕಾರಿಗಳು ಹುಡುಕಲು ಹೋದ ವೇಳೆ ಬಿದಿರುತಳದಲ್ಲಿರುವ ಕೃಷ್ಣೇ ಗೌಡ ಎಂಬವರ ಮನೆಯಲ್ಲಿ ಅಕ್ರಮವಾಗಿ ಮರವನ್ನು ಅಡಗಿಸಿಟ್ಟಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಕೃಷ್ಣೇ ಗೌಡ ಅವರ ಮೇಲೆ ಪ್ರಕರಣ ದಾಖಲಿಸಲಾಗಿದೆ. ಲಕ್ಷಾಂತರ ರೂ. ಬೆಲೆಬಾಳುವ ಮರಗಳನ್ನು ಅಕ್ರಮವಾಗಿ ಸಂಗ್ರಹಿಸಿಡಲಾದ ಪ್ರಕರಣ ಅರಣ್ಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಗಮನಕ್ಕೆ ಬಾರದೇ ಇರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಈ ಕುರಿತು ಸೂಕ್ತ ತನಿಖೆಯಾಗಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ ಎನ್ನಲಾಗಿದೆ.

Also Read  2006ಕ್ಕೂ ಮುನ್ನ ನೇಮಕಗೊಂಡ ನೌಕರರಿಗೆ ಹಳೆ ಪಿಂಚಣಿ ಯೋಜನೆ ಜಾರಿ     ➤  ಸಿಎಂ ಬೊಮ್ಮಾಯಿ..!

error: Content is protected !!
Scroll to Top