ಸುಳ್ಯ: ಜನರಲ್ಲಿ ಭಾರೀ ಕುತೂಹಲ ಮೂಡಿಸಿದ್ದ ಆಸಿಯಾ ಮರುವಿವಾಹ

(ನ್ಯೂಸ್ ಕಡಬ) newskadaba.com ಸುಳ್ಯ, ಡಿ. 02. ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು ಸುಳ್ಯ ಕಟ್ಟೆಕಾರ್ಸ್ ಕುಟುಂಬದ ಖಲೀಲ್ ಎಂಬವನನ್ನು ಮದುವೆಯಾಗಿ, ನಂತರ ಸುಳ್ಯ ಜನರಲ್ಲಿ ಭಾರೀ ವಿವಾದ ಸೃಷ್ಟಿಸಿದ್ದ ಅಸಿಯಾ ಕೇರಳ ಮೂಲದ ವ್ಯಕ್ತಿಯನ್ನು ಮದುವೆಯಾಗಿ ಸುದ್ದಿಯಾಗಿದ್ದಾರೆ.

ಸುಳ್ಯದ ಖಲೀಲ್ ಎಂಬವರನ್ನು ಮದುವೆಯಾಗಿ ನಂತರ ಆತ ಅವಳನ್ನು ಮನೆಗೆ ಸೇರಿಸದೇ ಸುಳ್ಯದಲ್ಲಿ ಆಹೋರಾತ್ರಿ ಧರಣಿ ಕೂತಿದ್ದ ಅಸಿಯಾ ಪ್ರಕರಣ ರಾಜ್ಯಾದ್ಯಂತ ಭಾರಿ ಸಂಚಲನ ಮೂಡಿಸಿತ್ತು .ಹಲವಾರು ಸಂಘಟನೆಗಳು ಮಾತುಗಾರಿಕೆ ನಡೆಸಿ ಪ್ರಕರಣವನ್ನು ಮುಗಿಸಲು ಪ್ರಯತ್ನಪಟ್ಟರೂ ಸಾಧ್ಯವಾಗಲಿಲ್ಲ. ಮಂಗಳೂರಿನಲ್ಲಿ ಅಸಿಯಾ ಪತ್ರಿಕಾಗೋಷ್ಟಿ ನಡೆಸಿ ಸುಳ್ಯದ ಖಲೀಲ್ ಮತ್ತು ನಾನು ಸ್ವ-ಇಚ್ಛೆಯಂತೆ ವಿಚ್ಚೇದನ ಪಡೆಯುವುದಾಗಿಯೂ ಮುಂದಕ್ಕೆ ತನಗೂ ಖಲೀಲ್ ಕಟ್ಟೆಕಾರ್ಸ್ ರಿಗೂ ಯಾವುದೇ ಸಂಭಂದವಿಲ್ಲವೆಂದೂ ಘೋಷಿಸಿದ್ದರು. ಇದೀಗ ಕೇರಳ ಮೂಲದ ಉದ್ಯಮಿ ಇಮ್ರಾನ್ ಎಂಬವರನ್ನು ಮದುವೆಯಾಗಿದ್ದಾರೆ ಎಂದು ತಿಳಿದು ಬಂದಿದೆ.

Also Read  ಗಣೇಶ ಚತುರ್ಥಿ- ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಸೆ. 19ರಂದು ರಜೆ ಘೋಷಣೆ

error: Content is protected !!
Scroll to Top