ಪಿಎಫ್ಐ ವತಿಯಿಂದ ಕಲ್ಲಾಪು ಯುನಿಟಿ ಮೈದಾನದಲ್ಲಿ ಬೃಹತ್ ಸಾರ್ವಜನಿಕ ಸಭೆ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ. 02. ಇತ್ತೀಚಿನ ದಿನಗಳಲ್ಲಿ ಕರ್ನಾಟಕದಲ್ಲಿ ಫ್ಯಾಸಿಸ್ಟರ ಅಟ್ಟಹಾಸ ಮಿತಿಮೀರುತ್ತಿದ್ದು, ಕ್ಷುಲ್ಲಕ ವಿಚಾರಗಳನ್ನು ಮುಂದಿಟ್ಟುಕೊಂಡು ಅಮಾಯಕ ಯುವಕರು, ವಿದ್ಯಾರ್ಥಿಗಳು ಹಾಗೂ ಮಹಿಳೆಯರ ಮೇಲೆ ಮಾರಣಾಂತಿಕ ಹಲ್ಲೆಯಂತಹ ಘಟನೆಗಳು ನಿರಂತರ ನಡೆಯುತ್ತಿದೆ. ಹಿಂದುತ್ವ ಕಾರ್ಯಕರ್ತರಿಗೆ, ಕಾಲೇಜಿನಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ತ್ರಿಶೂಲ ದೀಕ್ಷೆಯನ್ನು ನೀಡಿ ಮುಸ್ಲಿಂ ಯುವಕರ ಹಾಗೂ ವಿದ್ಯಾರ್ಥಿಗಳ ವಿರುದ್ಧ ಮಾರಣಾಂತಿಕ ಆಕ್ರಮಣದ ಮೂಲಕ ಪ್ರಯೋಗಿಸಲಾಗುತ್ತದೆ. ಪ್ರಚೋದನಾಕಾರಿ ಬಾಷಣದಿಂದ ಪ್ರೇರಿತವಾದ ಸಂಘಪರಿವಾರದ ಕಾರ್ಯಕರ್ತರು ಅಮಾಯಕರ ಮೇಲೆ ಅಲ್ಲಲ್ಲಿ ತ್ರಿಶೂಲದಲ್ಲಿ ಇರಿತದಂತಹ ದುಷ್ಕ್ರತ್ಯ ಪ್ರಕರಣಗಳು ನಡೆಯುತ್ತಿದೆ ಸಂಘಪರಿವಾರ ಈ ರೀತಿ ಪ್ರಕ್ಷುಬ್ದ ವಾತಾವರಣವನ್ನು ಸ್ರಷ್ಟಿಸಿ ರಾಜ್ಯದಲ್ಲಿ ಗಲಭೆ ನಡೆಸುವ ವ್ಯವಸ್ಥಿತ ಯೋಜನೆಯನ್ನು ರೂಪಿಸುತ್ತಿದೆ.

ಈ ಎಲ್ಲಾ ಘಟನೆಗಳನ್ನು ಖಂಡಿಸಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ರಾಜ್ಯಾದ್ಯಂತ “ಕರ್ನಾಟಕವನ್ನು ಫ್ಯಾಸಿಷ್ಠರಿಂದ ರಕ್ಷಿಸಿ” ಎಂಬ ಅಭಿಯಾನ ಹಮ್ಮಿಕೊಂಡಿದ್ದು ರಾಜ್ಯದ ಎಲ್ಲಾ ಕಡೆಗಳಲ್ಲಿ ಕಾರ್ನರ್ ಮೀಟ್, ಸಮುದಾಯದ ನಾಯಕರು, ಪ್ರಗತಿಪರ ಚಿಂತಕರು, ಸಾಮಾಜಿಕ ಹೋರಾಟಗಾರರೊಂದಿಗೆ ಸ್ನೇಹ ಸಮ್ಮಿಲನ ಕಾರ್ಯಕ್ರಮ ಹಾಗೂ ಪ್ರಮುಖ ನಗರಗಳಲ್ಲಿ ಸಾರ್ವಜನಿಕ ಕಾರ್ಯಕ್ರಮವನ್ನು ನಡೆಸಿ ಜಾಗೃತಿಯನ್ನು ಮೂಡಿಸಿದೆ. ಇದರ ಭಾಗವಾಗಿ ಡಿ.03 ರಂದು ಮಂಗಳೂರು ಸಮೀಪದ ಕಲ್ಲಾಪುವಿನ ಯುನಿಟಿ ಮೈದಾನದಲ್ಲಿ ಬೃಹತ್ ಸಾರ್ವಜನಿಕ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಈ ಕಾರ್ಯಕ್ರಮಕ್ಕೆ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು, ಸಾರ್ವಜನಿಕರು ಹಾಗೂ ಸಂಘಟನೆಯ ಹಿತೈಷಿಗಳು ಆಗಮಿಸಿ ಸಂಘಪರಿವಾರದ ಫ್ಯಾಸಿಸ್ಟ್ ಸಿದ್ದಾಂತದ ವಿರುದ್ಧ ಹೋರಾಟಕ್ಕೆ ಬೆಂಬಲ ನೀಡಬೇಕು ಎಂದು ಪತ್ರಿಕಾ ಪ್ರಕಟಣೆಯಲ್ಲಿ ಪಾಪ್ಯುಲರ್ ಫ್ರಂಟ್ ದ.ಕ ಜಿಲ್ಲಾ ಕಾರ್ಯದರ್ಶಿ ಮೊಯಿದೀನ್ ಹಳೆಯಂಗಡಿ ವಿನಂತಿಸಿದ್ದಾರೆ.

 

Also Read  ಎಡಮಂಗಲ: ಅಕ್ರಮ ಜಾನುವಾರು ಸಾಗಾಟ ► ಓರ್ವ ಆರೋಪಿಯ ಬಂಧನ, ಇಬ್ಬರು ಪರಾರಿ

error: Content is protected !!
Scroll to Top