ಲಾರಿ, ಹಿಟಾಚಿ ಹಾಗೂ ಜೆಸಿಬಿಗಳ ಬ್ಯಾಟರಿ ಕಳ್ಳತನ ಪ್ರಕರಣ ➤ ಕಡಬದ ವ್ಯಕ್ತಿ ಸೇರಿದಂತೆ ಇಬ್ಬರ ಬಂಧನ

(ನ್ಯೂಸ್ ಕಡಬ) newskadaba.com ಕೊಣಾಜೆ, ಡಿ. 01. ಮಂಗಳೂರು, ಡಿ. 01. ಇಲ್ಲಿನ ಕುರ್ನಾಡು ಮಿತ್ತಕೋಡಿ ಎಂಬಲ್ಲಿರುವ ಸೈಟ್ ಒಂದರಲ್ಲಿ ನಿಲ್ಲಿಸಲಾಗಿದ್ದ ಲಾರಿ, ಹಿಟಾಚಿ ಹಾಗೂ ಜೆಸಿಬಿಗಳ ಒಟ್ಟು 7 ಬ್ಯಾಟರಿಗಳನ್ನು ಕಳವುಗೈದ ಆರೋಪಿಗಳನ್ನು ಬಂಧಿಸುವಲ್ಲಿ ಕೊಣಾಜೆ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿಗಳನ್ನು ಕಡಬ ತಾಲೂಕಿನ ಕುಂತೂರು ನಿವಾಸಿ ರಾಝಿಕ್ ಕೆ (27) ಹಾಗೂ ಬಂಟ್ವಾಳದ ಪಟ್ರಕೋಡಿಯ ಸಿನಾನ್ (24) ಎಂದು ಗುರುತಿಸಲಾಗಿದೆ. ಮಿತ್ತಕೋಡಿ ಸೈಟಿನಲ್ಲಿ ನಿಲ್ಲಿಸಲಾಗಿದ್ದ ವಾಹನಗಳಿಂದ ಬ್ಯಾಟರಿಗಳನ್ನು ಕಳವುಗೈದ ಕುರಿತು ದೂರು ದಾಖಲಾಗಿದ್ದು, ಅದರಂತೆ ಪೊಲೀಸರು ಅಪರಾಧ ಸಿಬ್ಬಂದಿಗಳ ತಂಡವೊಂದನ್ನು ರಚಿಸಿ ಆರೋಪಿಗಳ ಪತ್ತೆಗಾಗಿ ಶೋಧಕಾರ್ಯ ನಡೆಸುತ್ತಿದ್ದರು ಎನ್ನಲಾಗಿದೆ. ಅದರಂತೆ ಇಂದು (ಡಿ.01) ಟಾಟಾ ಏಸ್ ವಾಹನವೊಂದರಲ್ಲಿ ಕದ್ದ ಬ್ಯಾಟರಿಗಳನ್ನು ಮಾರಾಟ ಮಾಡಲು ಒಯ್ಯುತ್ತಿರುವ ಕುರಿತು ಪೊಲೀಸರಿಗೆ ಮಾಹಿತಿ ದೊರೆತಿದ್ದು, ಇದರ ಪ್ರಕಾರ ಕೊಣಾಜೆ ಠಾಣಾ ತನಿಖಾಧಿಕಾರಿ ಮಲ್ಲಿಕಾರ್ಜುನ ಬಿರಾದಾರ ಅವರು ಸಿಬ್ಬಂದಿಗಳ ಜೊತೆ ಬಾಳೆಪುಣಿ ಗ್ರಾಮದ ಸುಟ್ಟಾಡಿ ಕ್ರಾಸ್ ಬಳಿ ಕಾಯುತ್ತಿದ್ದ ಸಂದರ್ಭ ಮೂಳೂರು ಕಡೆಯಿಂದ ಬಂದ ಟಾಟಾ ಎಸ್ ವಾಹನವನ್ನು ತಡೆದು ತಪಾಸಣೆ ನಡೆಸಿದಾಗ ಅದರಲ್ಲಿ 10 ಬ್ಯಾಟರಿಗಳು ಪತ್ತೆಯಾಗಿದ್ದವು. ಈ ಕುರಿತು ಇಬ್ಬರನ್ನು ವಿಚಾರಣೆ ನಡೆಸಿದಾಗ ಕಳವು ಪ್ರಕರಣ ಬೆಳಕಿಗೆ ಬಂದಿದೆ. ಆರೋಪಿಗಳಿಂದ ಟಾಟಾ ಎಸ ವಾಹನ ಸೇರಿದಂತೆ ಒಟ್ಟು 2 ಲಕ್ಷದ 70 ಸಾವಿರ ರೂ. ಮೌಲ್ಯದ ಬ್ಯಾಟರಿಗಳನ್ನು ವಶಕ್ಕೆ ಪಡೆಯಲಾಗಿದೆ.

Also Read  ಮಗಳಿಂದಲೇ ಸ್ವಂತ ಅಪ್ಪನ ಮೇಲೆ ಅತ್ಯಾಚಾರ ಆರೋಪ ➤ ಮಗಳು ಹಾಗೂ ಪತ್ನಿಯ ಹೆಸರು ಬರೆದು ಆತ್ಮಹತ್ಯೆಗೆ ಶರಣಾದ ತಂದೆ

 

error: Content is protected !!
Scroll to Top