ಕೋವಿಡ್ ನಿರ್ಬಂಧ ಹಿನ್ನೆಲೆ ➤ ಭಾರತ ಸೇರಿದಂತೆ ಹಲವು ದೇಶಗಳ ಪ್ರಯಾಣ ನಿಷೇಧವನ್ನು ಹಿಂಪಡೆದ ಸೌದಿ ಸರಕಾರ..!

(ನ್ಯೂಸ್ ಕಡಬ) newskadaba.com ರಿಯಾದ್, ಡಿ. 01. ಕೊರೋನಾ ಸಾಂಕ್ರಾಮಿಕ ಹಿನ್ನೆಲೆ ಸೌದಿ ಅರೇಬಿಯಾ ಅಂತರಾಷ್ಟ್ರೀಯ ಪ್ರಯಾಣಿಕರ ಮೇಲೆ ಹೇರಿದ್ದ ನಿಷೇಧವನ್ನು ಬುಧವಾರದಂದು ಹಿಂಪಡೆದಿದೆ ಎಂದು ಮೂಲಗಳು ತಿಳಿಸಿವೆ.

ಇದರಿಂದಾಗಿ ಈಜಿಫ್ಟ್, ಭಾರತ, ಪಾಕಿಸ್ತಾನ, ಇಂಡೋನೇಷ್ಯಾ, ಬ್ರೆಝಿಲ್ ಹಾಗೂ ವಿಯೆಟ್ನಾಂ ರಾಷ್ಟ್ರಗಳ ಪ್ರಯಾಣಿಕರು ಸೌದಿ ಪ್ರವೇಶಿಸುವ ಮುನ್ನ 14 ದಿನಗಳ ಕಾಲ ಕ್ವಾರಂಟೈನ್ ಇಲ್ಲದೆಯೇ ತಲುಪಬಹುದು. ಸೌದಿ ಪ್ರಯಾಣಿಸುವವರಿಗೆ ಆರೋಗ್ಯ ಇಲಾಖೆಯಿಂದ ಮಾನ್ಯತೆ ಪಡೆದ PCR ಪ್ರಮಾಣಪತ್ರ ಕಡ್ಡಾಯವಾಗಲಿದೆ ಮತ್ತು ಪ್ರಯಾಣದ 72 ಗಂಟೆಗಳ ಮೊದಲು ಆನ್ ಲೈನ್ ನಲ್ಲಿ ನೋಂದಣಿ ಮಾಡಿರಬೇಕು ಎಂದು ಆದೇಶದಲ್ಲಿ ತಿಳಿಸಿದೆ.

Also Read  ಕರ್ನಾಟಕದ ಹಂಪಿ ಮತ್ತು ಜಾರ್ಖಂಡ್‌ನಲ್ಲಿ ಭೂಕಂಪ

error: Content is protected !!
Scroll to Top