ಬಂಟ್ವಾಳದಲ್ಲಿ ನಾಪತ್ತೆ ದೂರು ದಾಖಲಾದ ಯುವಕನ ವಿರುದ್ದ ಕಾಸರಗೋಡಿನಲ್ಲಿ ವಂಚನೆ ಪ್ರಕರಣ ದಾಖಲು..! ➤ ಜ್ಯುವೆಲ್ಲರಿಯಿಂದ ಯುವಕನ ವಿರುದ್ದ ವಾಂಟೆಡ್ ನೋಟಿಸ್ ಜಾರಿ

(ನ್ಯೂಸ್ ಕಡಬ) newskadaba.com ಬಂಟ್ವಾಳ. ಡಿ. 01. ಕ್ರಿಕೆಟ್ ಆಡಲು ಹೋದ ಯುವಕನೋರ್ವ ಮನೆಗೆ ಬಾರದೆ ನಾಪತ್ತೆಯಾಗಿದ್ದಾರೆ ಎಂದು ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದರೆ, ಇದೀಗ ಅದೇ ಯುವಕನ ವಿರುದ್ಧ ಕಾಸರಗೋಡಿನಲ್ಲಿ ವಜ್ರ ಹಾಗೂ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾನೆ ಎಂಬುವುದಾಗಿ ಪ್ರಕರಣ ದಾಖಲಾಗಿದೆ.

ನಾಪತ್ತೆಯಾದ ಯುವಕನನ್ನು ಬಿ.ಮೂಡ ಗ್ರಾಮದ ತಾಳಿಪಡ್ಡು ನಿವಾಸಿ ಮುಹಮ್ಮದ್ ಫಾರೂಕ್ ಎಂದು ಗುರುತಿಸಲಾಗಿದೆ. ಈತ ನ.28 ರಂದು ಬೆಳಗ್ಗೆ ಸುಮಾರು 7:30ರ ವೇಳೆಗೆ ಕ್ರಿಕೆಟ್ ಆಡಲೆಂದು ಮನೆಯಿಂದ ಹೋದವನು, ವಾಪಾಸು ಮನೆಗೆ ಹಿಂತಿರುಗಿಲ್ಲ ಎಂದು ಅವರ ಪತ್ನಿ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆದರೆ ಇದೀಗ ಕಾಸರಗೋಡು ಟೌನ್ ಪೊಲೀಸ್ ಠಾಣೆಯಲ್ಲೂ ಈತನ ವಿರುದ್ಧ ಸುಲ್ತಾನ್ ಜುವೆಲ್ಲರಿಗೆ ಕೋಟ್ಯಾಂತರ ರೂ. ಮೌಲ್ಯದ ವಜ್ರ, ಚಿನ್ನಾಭರಣ ವಂಚನೆ ಮಾಡಿರುವುದಾಗಿ ದೂರು ದಾಖಲಿಸಲಾಗಿದೆ.

Also Read  ಶಾಲೆಯಲ್ಲಿ ಬಾಲಕಿಯರಿಗೆ ಅಶ್ಲೀಲ ವಿಡಿಯೋ ತೋರಿಸಿದ ಶಿಕ್ಷಕ ಆರೆಸ್ಟ್

ಸುಮಾರು ಒಂದೂವರೆ ವರ್ಷದಲ್ಲಿ ಈತ ಅಂಗಡಿಯಲ್ಲಿದ್ದ ಸುಮಾರು 2.5 ಕೋಟಿ ರೂ. ಮೌಲ್ಯದ ವಜ್ರ ಹಾಗೂ ಚಿನ್ನಾಭರಣ ದೋಚಿದ್ದು, ಜ್ಯುವೆಲ್ಲರಿಯ ಲೆಕ್ಕ ಪರಿಶೋಧನೆ ಮಾಡಿದ ಸಂದರ್ಭ ಕಳವು ಪ್ರಕರಣ ಬೆಳಕಿಗೆ ಬಂದಿದೆ. ಇದೀಗ ಫಾರೂಕ್ ವಿರುದ್ದ ಕಾಸರಗೋಡು ಸುಲ್ತಾನ್ ಗೋಲ್ಡ್ ಜ್ಯುವೆಲ್ಲರಿ ಆಡಳಿತ ಮಂಡಳಿಯವರು ಆತನನ್ನು ಪತ್ತೆ ಹಚ್ಚುವಂತೆ ಭಿತ್ತಿಪತ್ರ ಅಳವಡಿಸಿದ್ದಾರೆ.

error: Content is protected !!
Scroll to Top