ಚಿಕಿತ್ಸೆಗೆ ಸ್ಪಂದಿಸದೆ ರೋಗಿ ಮೃತಪಟ್ಟರೆ ವೈದ್ಯರು ಹೊಣೆಗಾರರಲ್ಲ ➤ ಸುಪ್ರೀಂ ಕೋರ್ಟ್

(ನ್ಯೂಸ್ ಕಡಬ) newskadaba.com ನವದೆಹಲಿ, ಡಿ. 01. ಯಾವುದೇ ವೈದ್ಯರು ತಮ್ಮ ರೋಗಿಗೆ ಜೀವವನ್ನು ಖಾತ್ರಿಪಡಿಸಿರುವುದಿಲ್ಲ, ಆದರೆ ಪ್ರತಿಯೊಬ್ಬರಿಗೂ ಅವರ ಸಾಮರ್ಥ್ಯಕ್ಕೆ ಅನುಸರಿಸಿ ಉತ್ತಮ ಚಿಕಿತ್ಸೆಯನ್ನು ನೀಡಲು ಪ್ರಯತ್ನಿಸಬಹುದು ಎಂದು ಸುಪ್ರೀಂ ಕೋರ್ಟ್ ಮಂಗಳವಾರದಂದು ಹೇಳಿದೆ.

ಒಂದು ವೇಳೆ ರೋಗಿಯು ಚಿಕಿತ್ಸೆಯ ಸಂದರ್ಭ ಮೃತಪಟ್ಟರೆ, ವೈದ್ಯರನ್ನು ತಪ್ಪಿತಸ್ಥರೆಂದು ಪರಿಗಣಿಸಲಾಗುವುದಿಲ್ಲ ಎಂದು ಒತ್ತಿ ಹೇಳಿದೆ. ಯಾವುದೇ ವೈದ್ಯರಾದರೂ ರೋಗಿಗಳನ್ನು ಉಳಿಸಲು ತಮ್ಮ ಕೈಯಲ್ಲಾದ ಮಟ್ಟಿಗೆ ಪ್ರಯತ್ನಿಸುತ್ತಾರೆ. ಆದರೂ ರೋಗಿ ಮೃತಪಟ್ಟರೆ ಇದಕ್ಕೆ ವೈದ್ಯರು ಕಾರಣರೆಂದು ಆರೋಪಿಸುವುದು ಸರಿಯಲ್ಲ. ವೈದ್ಯಕೀಯ ನಿರ್ಲಕ್ಷ್ಯದಿಂದ ಸಾವು ಸಂಭವಿಸಿದೆ ಎಂದು ತೀರ್ಮಾನಿಸಲು ತೀರ್ಪು ನೀಡುವ ಪ್ರಾಧಿಕಾರದ ಮೊದಲು ಸಾಕಷ್ಟು ವಸ್ತು ಅಥವಾ ವೈದ್ಯಕೀಯ ಪುರಾವೆಗಳು ಲಭ್ಯವಿರಬೇಕು ಎಂದು ಅದು ಒತ್ತಿ ಹೇಳಿದೆ.

ರೋಗಿ ಮೃತರಾದಾಗ ವೈದ್ಯರನ್ನು ದೂರುವ ಪ್ರವೃತ್ತಿ ಎಲ್ಲೆಡೆ ಕಾರ್ಯಗತವಾಗಿದ್ದು ಇಂತಹ ಪ್ರಕರಣಗಳಲ್ಲಿ ಸಾವನ್ನು ಒಪ್ಪಿಕೊಳ್ಳದ ಕುಟುಂಬಸ್ಥರ ಅಸಹಿಷ್ಣು ವರ್ತನೆ ಇದಾಗಿದೆ. ತಮ್ಮ ಸೌಕರ್ಯವಿಲ್ಲದೆ ಹಗಲಿರುಳು ದುಡಿಯುತ್ತಿರುವ ವೈದ್ಯಕೀಯ ವೃತ್ತಿಪರರ ಮೇಲೆ ದೌರ್ಜನ್ಯ ನಡೆಸುತ್ತಿರುವ ಪ್ರಕರಣಗಳು ಈ ಸಾಂಕ್ರಾಮಿಕ ರೋಗದಲ್ಲಿ ಚೆನ್ನಾಗಿ ಕಂಡುಬಂದಿವೆ ಎಂದು ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತಾ ಮತ್ತು ವಿ ರಾಮ ಸುಬ್ರಮಣಿಯನ್ ಅವರ ಪೀಠ ವಿಷಾದ ವ್ಯಕ್ತಪಡಿಸಿದ್ದಾರೆ.

Also Read  ಟಿವಿ ಕಾರ್ಯಕ್ರಮ ನೀಡುತ್ತಿದ್ದ ವೇಳೆ ಕುಸಿದು ಬಿದ್ದು ಕೃಷಿ ತಜ್ಞ ಮೃತ್ಯು

 

ಗ್ಯಾಂಗ್ರೀನ್ ಗೆ ತುತ್ತಾಗಿದ್ದ ದಿನೇಶ್ ಜೈಸ್ವಾಲ್ ಎಂಬವರು ಬಾಂಬೆ ಹಾಸ್ಪಿಟಲ್ ಗೆ ದಾಖಲಾಗಿ, ಅವರ ಕಾಲಿಗೆ ಶಸ್ತ್ರ ಚಿಕಿತ್ಸೆ ನಡೆಸಲಾಗಿತ್ತಾದರೂ ಬಳಿಕ ಅವರು ಮೃತಪಟ್ಟಿದ್ದರು. ಈ ಹಿನ್ನೆಲೆ ಇದಕ್ಕೆ ಆಸ್ಪತ್ರೆ ಸಿಬ್ಬಂದಿಯ ನಿರ್ಲಕ್ಷ್ಯವೇ ಕಾರಣ. ಅಲ್ಲದೇ ಶಸ್ತ್ರ ಚಿಕಿತ್ಸೆ ಸಂದರ್ಭದಲ್ಲಿ ತಜ್ಞ ವೈದ್ಯರು ಇರಲಿಲ್ಲ. ರೋಗಿಯ ಪರಿಸ್ಥಿತಿ ಗಂಭೀರವಾದಾಗಲೂ ವೈದ್ಯರು ಹಾಜರಿರಲಿಲ್ಲ ಎಂದು ದೂರಿದ್ದ ಕುಟುಂಬಸ್ಥರು ಪರಿಹಾರ ಕೋರಿ ಗ್ರಾಹಕ ಆಯೋಗದ ಮೊರೆ ಹೋಗಿದ್ದರು. ಈ ಕುರಿತು ವಿಚಾರಣೆ ನಡೆಸಿದ್ದ ಗ್ರಾಹಕ ಆಯೋಗವು ಪರಿಹಾರ ನೀಡುವಂತೆ ಆದೇಶಿಸಿತ್ತು. ಆದರೆ ಇದನ್ನು ಪ್ರಶ್ನಿಸಿ ಆಸ್ಪತ್ರೆ ಆಡಳಿತ ಮಂಡಳಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ಇದೀಗ ಗ್ರಾಹಕ ಆಯೋಗದ ಆದೇಶ ರದ್ದುಗೊಳಿಸಲಾಗಿದೆ.

Also Read  ಇನ್ಮುಂದೆ ಗ್ರಾ.ಪಂ. ಗಳಲ್ಲೇ ಸಿಗಲಿದೆ ಜಾತಿ- ಆದಾಯ ಪ್ರಮಾಣಪತ್ರ..! ➤ ಗ್ರಾಮೀಣ ಜನತೆಗೆ ಸಿಹಿಸುದ್ದಿ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ

 

error: Content is protected !!
Scroll to Top