ಎಲ್ ಪಿಜಿ ಬಳಕೆದಾರರಿಗೆ ಬಿಗ್ ಶಾಕ್ ➤ ಇಂದಿನಿಂದ ರೂ. 103.50ಕ್ಕೆ ಏರಿಕೆಯಾದ ವಾಣಿಜ್ಯ ಸಿಲಿಂಡರ್..!

(ನ್ಯೂಸ್ ಕಡಬ) newskadaba.com ನವದೆಹಲಿ, ಡಿ. 01. ವಾಣಿಜ್ಯ ಸಿಲಿಂಡರ್ ಗಳ ಎಲ್ ಪಿಜಿ ಬೆಲೆ ಬುಧವಾರ 103.50 ರೂ.ಗಳಷ್ಟು ಏರಿಕೆ ಕಂಡಿದ್ದು, ಇಂದಿನಿಂದಲೇ ಈ ಬೆಲೆ ಜಾರಿಗೆ ಬರಲಿದೆ. ಈ ಮೂಲಕ ಎಲ್ ಪಿಜಿ ಗ್ರಾಹಕರಿಗೆ ಮತ್ತೊಮ್ಮೆ ಬೆಲೆ ಏರಿಕೆಯ ಬಿಸಿ ತಟ್ಟಿದೆ.

 


ಇಂದಿನಿಂದ ದೆಹಲಿಯಲ್ಲಿ 19 ಕೆ.ಜಿ. ವಾಣಿಜ್ಯ ಸಿಲಿಂಡರ್ ಬೆಲೆ 2,104 ಆಗಲಿದ್ದು, ಈ ಹಿಂದೆ ಇದು 2,000.50 ರೂ. ಇತ್ತು. ಕೋಲ್ಕತ್ತಾದಲ್ಲಿ ಗ್ಯಾಸ್ ಸಿಲಿಂಡರ್ ಬೆಲೆ 101 ರೂ.ಗೆ ಏರಿಕೆಯಾಗಿದ್ದು,  ಈ ಮೂಲಕ ಗ್ಯಾಸ್ ಬೆಲೆ 2073.5 ರಷ್ಟು ಇದ್ದ ಬೆಲೆ ಇಂದು 2,174.5 ರೂ.ಗೆ ತಲುಪಿದೆ. ಮುಂಬೈನಲ್ಲಿ  1,950 ರೂ. ಇದ್ದ ಗ್ಯಾಸ್ ಬೆಲೆ ಇದೀಗ 2,051 ರೂ. ಗೆ ಏರಿಕೆಯಾಗಿದೆ. ಇನ್ನು ಚೆನ್ನೈನಲ್ಲಿ 19 ಕೆ.ಜಿ. ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ 2,234.50 ರೂ.ಗೆ ಏರಿಕೆಯಾಗಿದೆ. ಈ ಹಿಂದೆ ಚೆನ್ನೈನಲ್ಲಿ ಗ್ಯಾಸ್ ಬೆಲೆ 2,133 ರೂ. ಆಗಿದ್ದವು ಎಂದು ಮೂಲಗಳು ತಿಳಿಸಿವೆ.

Also Read  'ಅಪ್ಪು' ಅಗಲಿಕೆ ಬೆನ್ನಲ್ಲೇ ಬ್ಲೇಡ್ ನಲ್ಲಿ ಅಪ್ಪು ಎಂದು ಕುಯ್ದುಕೊಂಡು ಅಸ್ವಸ್ಥಳಾದ ವಿದ್ಯಾರ್ಥಿನಿ..! ➤ "ಐ ಲವ್ ಯೂ, ಐ ವಾಂಟ್ ಯೂ ಅಪ್ಪು" ಎಂದು ರಕ್ತದಲ್ಲೇ ಬರೆದುಕೊಂಡ ಅಭಿಮಾನಿ

error: Content is protected !!
Scroll to Top